ಪೋಸ್ಟರ್ ನಲ್ಲಿ ರಾಮನ ವೇಷ ಧರಿಸಿದ ರಾಹುಲ್..!! ರಾಹುಲ್ ಘರವಾಪಸಿ..??

ಅಮೇಠಿ : ಕಾಂಗ್ರೇಸ್‌ ಅಧ್ಯಕ್ಷರಾದ ರಾಹುಲ್‌ ಗಾಂಧಿಯವರು ಇವತ್ತು ಸ್ವಕ್ಷೇತ್ರವಾದ  ಅಮೇಠಿ ಭೇಟಿಗೆ ಹೋಗುತ್ತಿದ್ದಾರೆ. ಈಗಾಗಲೇ ಅಮೇಠಿಯಲ್ಲೀಗ  2019ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಸಿಕೊಂಡ ಪೋಸ್ಟರ್‌ ವಾರ್‌ ಸಹ ಆರಂಭವಾಗಿರುವುದು ಕಂಡು ಬಂದಿದೆ..!!

ಸ್ವಾತಂತ್ರ್ಯ ಬಂದಾಗಿನಿಂದ ಮುಸ್ಲಿಂ ಸಮುದಾಯದ ಓಲೈಕೆ ಮಾಡುತ್ತಿರುವ ಕಾಂಗ್ರೇಸ್ ಪಕ್ಷ ಇದೀಗ ಅಮೇಠಿಯಲ್ಲಿ ಹಚ್ಚಿರುವ ಪೋಸ್ಟರ್‌ ಒಂದರಲ್ಲಿ ರಾಹುಲ್‌ ಗಾಂಧಿಯನ್ನು  ಶ್ರೀರಾಮನಾಗಿಯೂ ಪ್ರಧಾನಿ ಮೋದಿಯನ್ನು ರಾವಣನನ್ನಾಗಿಯೂ ಕಾಣಿಸಲಾಗಿದೆ..!!
ಅಬ್ಬಾ..!! ವಿಚಿತ್ರವಾದರೂ ಸತ್ಯ.. ಇದಕ್ಕೆ ಅಚ್ಛೇದಿನ್ ಅನ್ನಬೇಕೋ ಅಥವಾ ಕಾಂಗ್ರೇಸ್ ತಮ್ಮ ವರ್ಚಸ್ಸು ಕಳೆದುಕೊಳ್ಳುತ್ರಿರುವಾಗ ಹಿಂದೂಗಳು ನೆನಪಾಗಿದ್ದಾರೆ ಅನ್ನಬೇಕೋ ನೀವೆ ಯೋಚಿಸಬೇಕು. ರಾಹುಲ್ ಗಾಂಧಿ ಇರುವ ಪೋಸ್ಟ ಒಂದರಲ್ಲಿ ಹೀಗೆ ಬರೆದಿದೆ “ರಾಹುಲ್‌ ರೂಪ್‌ ಮೇ ಭಗವಾನ್‌ ರಾಮ್‌ ಕಾ ಅವತಾರ್‌, 2019 ಮೇ ಆಯೇಗಾ ರಾಹುಲ್‌ ರಾಜ್‌’ ಎಂಬ ಘೋಷ ವಾಕ್ಯವನ್ನು ಬರೆದಿದ್ದಾರೆ..!!

ಇಷ್ಟಕ್ಕೆ ಮುಗಿದಿಲ್ಲಾ ಇದು, ಇನ್ನೊಂದು ಪೋಸ್ಟರ್‌ನಲ್ಲಿ ಕ್ಯಾಥೊಲಿಕ್ ಕ್ರೈಸ್ತರಾದ ರಾಹುಲ್‌ ಅವರನ್ನು ಶ್ರೀಕೃಷ್ಣ ರೂಪದಲ್ಲಿ ಚಿತ್ರಿಸಲಾಗಿದೆ. “ಸಂಘರ್ಷ್‌ ಸೇ ವಿಜಯ್‌ ಕೀ ಓರ್‌ ಚಲ್‌ ದಿಯೇ ಮಹಾರಥಿ” ಎಂಬ ವಾಕ್ಯವನ್ನು ಈ ಪೋಸ್ಟರ್‌ನಲ್ಲಿ ಬರೆದಿದ್ದಾರೆ. ಈಗಲೇ ಈ ಡೊಂಗಿ ಹಿಂದೂತ್ವದ ನಾಟಕ ಮಾಡುತ್ತಿರುವ ಕಾಂಗ್ರೇಸ್ ಇನ್ನೂ ಚುನಾವಣೆ ಹತ್ತಿರ ಬರುತ್ತಿದಂತೆ “ಮಂದಿರ್ ವಹಿ ಬನಾಯೇಂಗೆ” ಅಂದರು ಅಚ್ಚರಿಪಡಬೇಕಾಗಿಲ್ಲಾ..!!

ಕಾಂಗ್ರೇಸ್‌ ರಾಷ್ಟ್ರಾಧ್ಯಕ್ಷರಾಗಿ ರಾಹುಲ್‌ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಅಮೇಠಿಗೆ ಭೇಟಿ ನೀಡುತ್ತಿದ್ದಾರೆ. ಸ್ವಕ್ಷೇತ್ರವಾದ ಅಮೇಠಿಯಲ್ಲಿ ಏಳು ಕಡೆಗಳಲ್ಲಿ ರಾಹುಲ್ ಗಾಂಧಿ ರೋಡ್‌ ಶೋ ನಡೆಸಲಿದ್ದಾರೆ. ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ರಾಹುಲ್‌ಗೆ ಅಮೇಠಿಯಲ್ಲಿ ಭವ್ಯ ಸ್ವಾಗತದ ಏರ್ಪಾಡು ಮಾಡಿದ್ದಾರೆ ಎಂದು ಕಾಂಗ್ರೆಸ್‌ ವಕ್ತಾರ ಅಮರ್‌ ನಾಥ್‌ ಪತ್ರಕರ್ತರಿಗೆ ತಿಳಿಸಿದ್ದಾರೆ.