9 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ ಇಸ್ರೇಲ್ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು ಗೊತ್ತೆ..??

ನವದೆಹಲಿ :  ನಮ್ಮ ಭಾರತೀಯರ ಒಂದು ಕೆಟ್ಟ ಚಾಳಿ ಏನೆಂದರೇ ಯಾರಾದರೂ ಮುಂದೆ ಹೋಗುತ್ತಿದ್ದರೆ. ಅವರ ಕಾಲು ಜಗ್ಗುವುದು, ಯಾರಾದರೂ ಒಳ್ಳೆ ಕೆಲಸ ಮಾಡುತ್ತಿದ್ದರೆ ಅವರ ಬಗ್ಗೆ ಕೆಟ್ಟದಾಗಿ ಮಾಡನಾಡುತ್ತಾರೆ. ತಾವು ಕೆಲಸ ಮಾಡಲ್ಲಾ, ಮಾಡುವವರನ್ನು ಮಾಡಲು ಬಿಡಲ್ಲಾ.

ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೀಯಾಳಿಸುವವರೆ ಜಾಸ್ತಿ, ಅಂತಹದರಲ್ಲಿ ಭವ್ಯ ಭಾರತವನ್ನು ಮಹತ್ತರ ಬದಲಾವಣೆಯತ್ತ ಕೊಂಡೊಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು “ಕ್ರಾಂತಿಕಾರಿ ನಾಯಕ” ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಡಿ ಹೊಗಳಿದ್ದಾರೆ. ಪಾಪ ಇವರ ಹೊಗಲಿಕೆ ಅದೇಷ್ಟು ಜನರ ನಿದ್ದೆ ಕೆಡಿಸಿದೆಯೋ ದೇವರಿಗೆ ಗೊತ್ತು..!!

ಭಾರತ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಮಹತ್ವ ಎನಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ಅವರು ಭಾನುವಾರದಿಂದ ಆರು ದಿನಗಳ ಕಾಲ ಭಾರತ ಪ್ರವಾಸ ಮಾಡಲಿದ್ದಾರೆ.

ಸೋಮವಾರ ನವದೆಹಲಿಯ ಹೈದ್ರಾಬಾದ್ ನಿವಾಸದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಉಭಯ ದೇಶದ ನಾಯಕರು ಮಹತ್ವದ 9 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ಮಾತನಾಡಿದರು.

ಸೈಬರ್ ಸುರಕ್ಷೆ, ತೈಲ ಮತ್ತು ನೈಸರ್ಗಿಕ ಅನಿಲ ಸೇರಿದಂತೆ 9 ಮಹತ್ವದ ಒಪ್ಪಂದಗಳಿಗೆ ಪ್ರಧಾನಿ ಮೋದಿ ಮತ್ತು ನೆತನ್ಯಾಹು ಸಹಿ ಹಾಕಿದರು.