ಫೇಸ್‌ಬುಕ್‌‌ನ ಈ ಟೆಕ್ನಾಲಜಿ ಬಗ್ಗೆ ಕೇಳಿದ್ರೆ ನಿಜಕ್ಕೂ ನೀವು ದಂಗಾಗುತ್ತಿರಾ..!!

ಇವತ್ತಿನ ದಿನಗಳಲ್ಲಿ ಗಂಡ-ಹೆಂಡತಿ ಎಷ್ಟು ಹೊತ್ತು ಮಾತಾಡುತ್ತಾರೋ ಅಥವಾ ಮಾತಾಡುವುದಿಲ್ಲವೋ ಗೊತ್ತಿಲ್ಲ. ಆದರೆ ನಿತ್ಯ ಬೆಳಗಾಗಿ ಕಣ್ಣು ತೆರದಾಗಿನಿಂದ ರಾತ್ರಿ ಅಪ್ಪ-ಅಮ್ಮನಿಗೆ ಗೊತ್ತಾಗದಂತೆ ರಾತ್ರಿ ನಿದ್ದೆಗೆ ಜಾರುವವರೆಗೂ ನಾವು-ನೀವೆಲ್ಲರೂ ಫೇಸ್‌ಬುಕ್‌ ಎಂಬ ಮಾಯೆಯೊಳಗೆ ನಮ್ಮನ್ನು ನಾವು ಮರೆತಿರುತ್ತೆವೆ.

ದಿನ ಬೆಳಗಾದರೆ ಸಾಕು, ಕಣ್ಣು ತೆರೆದು ನಾವು ಮೊದಲು ನೋಡುವುದೆ ಈ ಸೋಷಿಯಲ್ ಮಿಡಿಯಾ ಫೇಸ್‌ಬುಕ್‌ ಮತ್ತು ವಾಟ್ಸಪ್ ಅನ್ನು. ಮೊದಲೇಲ್ಲಾ ಎದ್ದ ತಕ್ಷಣ ಸ್ವಲ್ಪ ಹೊತ್ತ ಜ್ಞಾನ ಮಾಡಿ ನಂತರ ಅಂಗೈ ಉಜ್ಜಿ ಕಣ್ಣಿರ ಹತ್ತಿರಕ್ಕೆ ತಂದು ದೇವರನ್ನು ನೆನೆಯುತ್ತಾ ಕಣ್ಣು ಬಿಡುವ ಕಾಲವೊಂದಿತ್ತು. ಆದರೆ ಈಗ ಕಾಲ ಹಾಗಿಲ್ಲಾ..

ಕಣ್ಣು ತೆರೆದರೆ ಕಣ್ಣೆದುರಿಗೆ ಬರುವುದು ನೀಲಿ ಮತ್ತು ಹಸಿರು ಬಣ್ಣ ಸಾಮಾಜಿಕ ಜಾಲತಾಣಗಳು ಅಂದರೆ ಫೇಸ್‌ಬುಕ್‌ ಮತ್ತು ವಾಟ್ಸಪ್.. ನಿತ್ಯ ನಾವು ಗೆಳೆಯರೊಂದಿಗೆ ಕಳೆದ ಕ್ಷಣಗಳನ್ನು, ಪ್ರೇಯಸಿ/ಹೆಂಡತಿಯೊಂದಿಗೆ ಕಳೆದ ರಸಮಯ ಕ್ಷಣಗಳನ್ನು ಈ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಗೆಳೆಯ/ತಿಯರ ಮೆಚ್ಚುಗೆ, ಅಭಿಪ್ರಾಯಕ್ಕಾಗಿ ಹಾತೋರೆಯುತ್ತೇವೆ.

ಹಾಕಿದ ಪೋಸ್ಟ ಎಷ್ಟು ಲೈಕ್ ಆಯಿತು, ಅವಳು/ನು ಲೈಕ್ ಮಾಡಿದ್ರಾ..?? ಅಪ್ಪಿ ತಪ್ಪಿ ಬಾಸ್ ಏನಾದ್ರೂ ನಾನು ಸುಳ್ಳು ಹೇಳಿ ರಜೆ ತಗೊಂಡಿದ್ದು ಗೊತ್ತಾಯಿತಾ..?? ಹೀಗೆ ಹತ್ತ ಹಲವು ಯೋಚನೆಯಲ್ಲಿ ನೆಟ್ಟಿಗರು ಜೀವನದ ಅಮೂಲ್ಯ ಸಮಯವನ್ನು ಸಾಮಾಜಿಕ ಜಾಲತಾಣಗಳಿಗೆ ಮೀಸಲಿಟ್ಟಿದ್ದಾರೆ.

ವಿಷಯ ಏನಪ್ಪಾ ಅಂದ್ರೇ.. ನಾವು ನಿತ್ಯ ಬೆಳಗಾದರೆ ಬಳಸುವ ಫೇಸ್‌ಬುಕ್‌ ಹತ್ತಿರ ಎಂತಹ ಅಪಾಯಕಾರಿ ತಂತ್ರಜ್ಞಾನಗಳು ಇವೆ ಅಂತ ಕೇಳಿದರೆ ನಿಜಕ್ಕೂ ನೀವು ದಂಗಾಗುತ್ತಿರಾ..!! ಹೌದು ಅಂತ ಮೋಸ್ಟ ಡೆಂಜರಸ್ ಟೆಕ್ನಾಲಜಿ ಈ ಫೇಸ್‌ಬುಕ್‌‌ನಲ್ಲಿವೇ..

ಏನ ಹೇಳತಾ ಇದಿನಿ ತಿಳಿತಿಲ್ವಾ..?? ಬನ್ನಿ ಹೇಳತಿನಿ..

ನೀವು ಹಿಂದಿನ ಯಾರ ಜೊತೆ ಬಾರ್ ನಲ್ಲಿ ಕುಂತು ಕುಡಿದ್ದಿರಾ ಅಂತ ಪತ್ತೆ ಹಚ್ಚಿ, ನಿಮಗೂ ಮತ್ತು ಅವರಿಗೂ ಫ್ರೇಂಡ್ ರಿಕ್ವೆಸ್ಟ್ ಕಳಸಿ ಇಬ್ಬರನ್ನೂ ಬೆಸೆಯಬಲ್ಲದು..!!

ಇಷ್ಟೇ ಅಲ್ಲಾ.. ನೀವು ಯಾವ ವ್ಯಕ್ತಿಯ ಜೊತೆಗೆ ನಡೆಯುತ್ತಿದ್ದಿರಾ, ಮುಖಾಮುಖಿಯಾಗಿ ಮಾತನಾಡುತ್ತಿದ್ದಾರೆ ಎಂಬುದನ್ನೂ ಸಹ ಪತ್ತೆ ಹಚ್ಚುವ ಖತರ್‌ನಾಕ್ ಟೆಕ್ನಾಲಜಿ ಈ ಫೇಸ್‌ಬುಕ್‌ ಬಳಿ ಇವೆ.

ಆದರೆ ಸದ್ಯ ಈ ಟೆಕ್ನಾಲಜಿಯನ್ನು ತಾನು ಬಳಸುವುದಿಲ್ಲ ಎಂದು ಫೇಸ್‌ಬುಕ್‌ ಹೇಳಿದೆ. ಒಂದು ವೇಳೆ ಈ ಟೆಕ್ನಾಲಜಿಯನ್ನು ಫೇಸ್‌ಬುಕ್‌ ಉಪಯೋಗಿಸಿದರೇ ಮುಂದಾಗುವ ಪರಿಣಾಮವನ್ನು ಸುಮ್ಮನೆ ಯೋಚಿಸಿ ನೋಡಿ..!!

ಈಗಾಗಲೇ “ಲೋಕೆಶನ್” ತಂತ್ರಜ್ಞಾನವನ್ನು ಫೇಸ್‌ಬುಕ್‌ ಬಳಸುತ್ತಿದೆ. ಅಂದರೆ ಇಬ್ಬರು ಗೆಳೆಯರು ಒಂದೇ ಸ್ಥಳದಲ್ಲಿ ಇದ್ದಾರೆ ಎಂದು ತಿಳಿಸಲು ಫೇಸ್‌ಬುಕ್‌ ಇದನ್ನು ಉಪಯೋಗಿಸುತ್ತದೆ. “Nearby Friends” ಅನ್ನುವ ಆಯ್ಕೆಯನ್ನು ನೀವು ಗಮನಿಸಬಹುದು.

ಇನ್ನೂ ಫ್ರೇಂಡ್‌ಗಳನ್ನು ಯಾವ ಯಾವ ರೀತಿ ಸಜೆಸ್ಟ ಮಾಡಬಹುದು ಎಂಬ ವಿಚಾರದಲ್ಲಿ ಹಲವಾರು ಟೆಕ್ನಾಲಜಿಗಳ ಪೇಂಟೆಂಟ್ ಗೆ ಅರ್ಜಿ ಸಲ್ಲಿಸಿದೆ.

ಬಳಕೆದಾರರ ಪ್ರೈವಸಿಗೆ ಧಕ್ಕೆ ತರುವ ಯಾವುದೇ ಟೆಕ್ನಾಲಜಿ ಇಲ್ಲಾ ಎಂದು ಫೇಸ್‌ಬುಕ್‌ ಹೇಳಿಕೊಳ್ಳುತ್ತಿದೆ ಯಾದರೂ. ನಿಮ್ಮ ಕ್ಯಾಮೆರಾದ ಲೇನ್ಸ್‌ನ ಮೇಲೆ ಕುಳಿತ ಧೂಳಿನಿಂದಲೇ ನೀವು ಎಲ್ಲಿದ್ದೀರಾ ಎಂಬುದನ್ನು ಪತ್ತೆ ಹಚ್ಚು ಖತರ್‌‌ನಾಕ್ ಟೆಕ್ನಾಲಜಿ ಫೇಸ್‌ಬುಕ್‌ ಬಳಿ ಇವೆ ಎಂದರೇ ನೀವು ನಿಜಕ್ಕೂ ಕೊಂಚ ಗಾಬರಿ ಹುಟ್ಟಿಸದೇ ಇರುತ್ತೆ..??

-ಕುಮಾರ ಮ.