ಸ್ವತಂತ್ರ ಭಾರತದ ಮೊದಲ ಸೇನಾ ಜನರಲ್ ಆಗಿ ಬ್ರಿಟಿಷ್ ಅಧಿಕಾರಿಯನ್ನೇ ನೇಮಿಸಬೇಕೆಂದು ಹೇಳಿದ ಆ ಮಹಾನುಭಾವ ಯಾರು ಗೊತ್ತೆ..??

1947 ರಲ್ಲಿ ಬ್ರಿಟೀಷರ ಕಪಿಮುಷ್ಟಿಯಿಂದ ಭಾರತವೇನೋ ಸ್ವಾತಂತ್ರ್ಯ ಪಡೆಯಿತು. ಅದು ಭೌತಿಕವಾಗಿ ಮಾತ್ರ ಹೊರತು ಮಾನಸಿಕತೆಯಿಂದಲ್ಲ.

ಭಾರತದ ಸ್ವಾತಂತ್ರ್ಯದ ಹಿಂದಿನ ದಿನದಂದು ‘tryst with destiny’ ಎಂಬ ಮೊದಲ ಭಾಷಣವನ್ನು ನಮ್ಮ ಮೊದಲ ಪ್ರಧಾನಿ(de-facto) ಜವಾಹರ್ ಲಾಲ್ ನೆಹರು ಅವರು ಮಾಡಿದ್ದರು. ನೆಹರು ಅವರ ಆ ಭಾಷಣ ಭಾರತದ ಜನರನ್ನ ಉದ್ದೇಶಿಸಿ ಮಾಡಿದ ಮೊದಲ ಭಾಷಣವಾಗಿತ್ತು.

ನೆಹರು ಭಾಷಣದಲ್ಲಿ ಹೇಳಿದರು,
“ಈ ಸ್ವಾತಂತ್ರ್ಯಕೋಸ್ಕರ ನಾವು ಸತತ ಪ್ರಯತ್ನ ಮಾಡಿದ್ದೇವೆ ಈಗ ನಾವು ನಮ್ಮ ಪ್ರತಿಜ್ಞೆಯ
ಫಲವಾಗಿ ಕೆಡೆಗೂ ಆ ಸಮಯ ಬಂದಿದೆ.

ಪ್ರಪಂಚವು ಮಧ್ಯರಾತ್ರಿಯಲ್ಲಿ ನಿದ್ರಿಸುತ್ತಿರುವಾಗ, ಭಾರತಕ್ಕೆ ಮತ್ತೆ ತಮ್ಮ ಸ್ವಾಭಿಮಾನದ ಸ್ವಾತಂತ್ರ್ಯ ಪಡೆದುಕೊಂಡು ತಮ್ಮ ಜೀವನ ಮತ್ತು ಸ್ವಾತಂತ್ರ್ಯ ಮರಳಿ ಪಡೆದುಕೊಂಡ ಸಂಭ್ರಮ”.

ಭಾರತವು ಸ್ವಾತಂತ್ರ್ಯವನ್ನು ಪಡೆದುಕೊಂಡಿರುವುದರಿಂದ, ವಿವಿಧ ಇಲಾಖೆಗಳಲ್ಲಿ ಉನ್ನತ ಅಧಿಕಾರಿಗಳನ್ನು ನೇಮಿಸುವ ಅಗತ್ಯವಿತ್ತು.

ಒಂದು ದೇಶವೆಂದರೆ ಅದಕ್ಕೆ ಗಡಿ ಅಥವ ಬಾರ್ಡರ್ ಅನ್ನೋದಿರುತ್ತೆ, ಅದಾಗಲೇ ಭಾರತದಿಂದ ಬೇರ್ಪಟ್ಟ ಪಾಪಿ ಪಾಕಿಸ್ತಾನ ಭಾರತದ ಮೇಲೆ ಹೊಂಚು ಹಾಕಿ ಕೂತಿತ್ತು.

ಒಂದು ದೇಶವೆಂದರೆ ಅದರದ್ದೇ ಆದ ಸೈನ್ಯವಿರುತ್ತೆ, ಸೈನ್ಯಾಧಿಕಾರಿಗಳು ಇರ್ತಾರೆ. ಹಾಗೆಯೇ ಭಾರತ ಸ್ವಾತಂತ್ರ್ಯವಾದ ನಂತರ ಭಾರತದ ಸೇನಾ ಜನರಲ್ ನೇಮಕವು ಅತ್ಯಂತ ಮಹತ್ವವಾಗಿತ್ತು.

ಭಾರತದ ಪ್ರಧಾನಮಂತ್ರಿ ನೆಹರು ಭಾರತೀಯ ಮೊದಲ ಸೇನಾ ಜನರಲ್ ಆಯ್ಕೆ ಮಾಡಲು ಸೇನಾಧಿಕಾರಿಗಳ ಸಭೆಯೊಂದನ್ನ ಕರೆದಿದ್ದರು.

“ಭಾರತದ ಮೊದಲ ಸೇನಾ ಜನರಲ್ ಆಗಿ ಒಬ್ಬ ಬ್ರಿಟಿಷ್ ಅಧಿಕಾರಿಯನ್ನು ನೇಮಿಸಬೇಕೆಂದು ನಾನು ಭಾವಿಸುತ್ತೇನೆ, ಏಕೆಂದರೆ ನಾವು ಭಾರತೀಯರು ಸೇನೆ ಮುನ್ನಡೆಸಲು ಸಾಕಷ್ಟು ಅನುಭವವನ್ನು ಹೊಂದಿಲ್ಲ” ಎಂದು ನೆಹರು ಅವರು ಪ್ರಸ್ತಾಪಿಸಿದ್ದರು.

ಈ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಮುಖಂಡರು, ಧುರಿಣರು, ಮತ್ತು ಅಧಿಕಾರಿಗಳು ಬ್ರಿಟೀಷರ ಅಡಿಯಲ್ಲಿ ಕೆಲಸ ಮಾಡಿದ್ದರಿಂದ ಬ್ರಿಟಿಷ್ ಅಧಿಕಾರಿಯಾಗಲಿ ಅಂತ ನೆಹರುವಿಗೆ ತನ್ಮ ನಿಷ್ಠೆ ತೋರಿ ಆತನ ನಿರ್ಧಾರಕ್ಕೆ ಜೈ ಅಂತ ಒಪ್ಪಿಗೆ ನೀಡಿದ್ದರು.

ಆದರೆ ಸಭೆಯಲ್ಲಿ ಒಬ್ಬ ಅಧಿಕಾರಿ ನಾತು ಸಿಂಗ್ ರಾಥೋರ್ ಅವರು ಎದ್ದು ನಿಂತು ತಾನು ಈ ಪ್ರಕ್ರಿಯೆಯ ಬಗ್ಗೆ ಮಾತನಾಡಲು ಅನುಮತಿಯನ್ನ ಕೇಳಿದರು.

ನೆಹರು ಆಶ್ಚರ್ಯಚಕಿತರಾದರು. ರಾಥೋರ್ ಅವರಿಗೆ ಮುಕ್ತವಾಗಿ ತಮ್ಮ ಸಲಹೆ ಸೂಚನೆಗಳನ್ನ ಪ್ರಸ್ತುತಪಡಿಸಲು, ಮಾತನಾಡಲು ಹೇಳಿದರು.

ಮಾತನಾಡಲು ಶುರು ಮಾಡಿದ ರಾಥೋರ್

“ನೋಡಿ ಸರ್, ನಾವು ಭಾರತೀಯರೂ ಕೂಡ ಈ ದೇಶವನ್ನ ಮುನ್ನಡೆಸೋಕೆ ಸಾಕಷ್ಟು ಅನುಭವವನ್ನು ಹೊಂದಿಲ್ಲ & ಅಂತಹ ಸಮರ್ಥ ಅನುಭವಿ ರಾಜಕಾರಣಿಯೂ ನಮ್ಮಲ್ಲಿಲ್ಲ, ನಾವ್ಯಾಕೆ ಬ್ರಿಟಿಷ್ ವ್ಯಕ್ತಿಯನ್ನ ಭಾರತದ ಪ್ರಧಾನಮಂತ್ರಿ ಮಾಡಬಾರದು?” ಅಂತ ಕೇಳಿದರು.

ಆಗ ನೆಹರೂವಿಗೆ ಹೇಳತೀರದ ಮುಜುಗರವಾಯಿತು, ನೆಹರು ರಾಥೋರ್ ಅವರಿಗೆ ಮೊದಲ ಸೇನಾ ಜನರಲ್
ಹೆಸರನ್ನ ಸೂಚಿಸುವುದಕ್ಕೆ ಕೇಳಿದರು.

ಅದಕ್ಕೆ ರಾಥೋರ್ ಅವರು ಸೂಚಿಸಿದ್ದು ನಮ್ಮ ಕರ್ನಾಟಕದ ಕೊಡಗಿನ ಹೆಮ್ಮೆಯ ಪುತ್ರ ಕಾರಿಯಪ್ಪ ಅವರ ಹೆಸರನ್ನ!!

ಆ ಸಲಹೆಯನ್ನ ಸ್ವೀಕರಿಸಿದ ನೆಹರು ಸೇನಾ ಜನರಲ್ ಆಗಿ ಕಾರಿಯಪ್ಪನವರನ್ನೇ ನೇಮಿಸಿದರು.

ಸ್ವತಂತ್ರ ಭಾರತದ ಮೊದಲ ಸೇನಾ ಜನರಲ್ ಆಗಿ ನೇಮಕಗೊಂಡ ಜನರಲ್ ಕಾರಿಯಪ್ಪ ಸೈನಿಕರ ಏಕೀಕರಣಕ್ಕೆ ಮತ್ತು ಸೈನ್ಯವನ್ನು ಬಲಪಡಿಸಲು ಸಾಕಷ್ಟು ಶ್ರಮಪಟ್ಟು ದುಡಿದರು, ಅವರ ಸೇವೆ ನಿಜಕ್ಕೂ ಪ್ರಶಂಸನೀಯವೇ ಸರಿ!!

ಈ ಒಂದು ಘಟನೆಯಿಂದ ಅರ್ಥವಾಗುತ್ತೆ
ನೆಹರು ಅವರ ಬ್ರಿಟಿಷ್ ವ್ಯಾಮೋಹ ಮತ್ತು ಅವರು ಪ್ರಧಾನಮಂತ್ರಿ ಆಗುವ ಗುಂಗಿನಲ್ಲಿ ನಮ್ಮ ದೇಶವನ್ನು ಮತ್ತೆ ಪರಕೀಯರ ಕೈಯಲ್ಲಿ ಕೊಡೋಕೆ ಸಿದ್ಧರಾಗಿದ್ದರು ಅಂತ.

ಅದೃಷ್ಟವಶಾತ್ ರಾಥೋರ್ ರಂಥವರ ದೇಶಪ್ರೇಮದ ಫಲವಾಗಿ ಕಾರಿಯಪ್ಪ ಎಂಬ ಸಮರ್ಥ ಸೇನಾಧಿಕಾರಿ ಭಾರತಕ್ಕೆ ಸಿಕ್ಕರು.

ಒಂದು ವೇಳೆ ನೆಹರು ಅವರ ನಿರ್ಧಾರವನ್ನ ರಾಥೋರ್ ಕೂಡ ಬೆಂಬಲಿಸಿದಿದ್ದರೆ ಇವತ್ತಿಗೂ ನಮ್ಮ ದೇಶ ಬ್ರಿಟಿಷ್ ಆಳ್ವಿಕೆಯಲ್ಲಿ ಮುಂದುವರೆಯುತಿತ್ತೇನೋ.

ರಾಥೋರ್ ರವರಿಗೆ ಹಾಗು ಭಾರತದ ಸೇನಾ ಜನರಲ್ ಆಗಿ ದೇಶ ಭದ್ರತೆಗೋಸ್ಕರ ಅವಿರತವಾಗಿ ದುಡಿದ ಜನರಲ್ ಕಾರಿಯಪ್ಪನವರಿಗೆ ನನ್ನದೊಂದು ಸಲಾಂ!!

ಸದಾ ಬ್ರಿಟಿಷ್ ಹೆಂಗಳೆಯರ ಸಹವಾಸದಲ್ಲಿ ತೇಲುತ್ತಿದ್ದ ನೆಹರು ಬದಲು ಸರ್ದಾರ್ ಪಟೇಲರು ಆಯ್ಕೆಯಾಗಿದ್ದಿದ್ದರೆ ನಮ್ಮ ದೇಶವನ್ನ ಅಕ್ಕಪಕ್ಕದ ರಾಷ್ಟ್ರಗಳು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ.

ಇಂದು ನೆಹರು ಜನ್ಮದಿನ, ಆತನ ಜನ್ಮದಿನವನ್ನ ಮಕ್ಕಳ ದಿನಾಚರಣೆ ಅಂತಲೂ ಆಚರಿಸುತ್ತಾರಲ್ಲವೇ? ಅದು ಯಾವ ಪುರುಷಾರ್ಥಕ್ಕಾಗಿ ಅನ್ನೋದು ಅರ್ಥವಾಗಲಿಲ್ಲ.

ಭಾರತದ ಕೊನೆಯ ವೈಸರಾಯ್ ಆಗಿದ್ದ ಮೌಂಟ್ ಬ್ಯಾಟನ್ ಹೆಂಡತಿಯಾಗಿದ್ದ ಎಡ್ವಿನಾ ಬ್ಯಾಟನ್ ಜೊತೆ ಹಾಗು ವಿದೇಶಿ ಮಹಿಳೆಯರ ಚಪಲ ಹೊಂದಿದ್ದ ನೆಹರುವಿನ ಜನ್ಮದಿನವನ್ನ ಮಕ್ಕಳ ದಿನಾಚರಣೆಯಾಗಿ ಆಚರಿಸುವುದು ಮುಗ್ಧ ಮಕ್ಕಳ ಮನಸ್ಸಿಗೆ ಅವಮಾನ ಮಾಡಿದಂತೆಯೇ ಸರಿ.

– ಪ್ರಥ್ವಿ