ಮಾಧ್ಯಮದ ಮುಂದೆ ಕಣ್ಣಿರಿಟ್ಟ ಪ್ರವೀಣಬಾಯ್ ಅವರು ಹೇಳಿದ್ದೇನು ಗೊತ್ತೆ..!?

ಜೈಪುರ : “ಸುಮಾರು ಹತ್ತು ವರ್ಷದ ಹಳೆಯ ಕೇಸ್ ಒಂದರಲ್ಲಿ ನನ್ನ ಬೆನ್ನಿಗೆ ಬಿದ್ದಿದ್ದ ರಾಜಸ್ಥಾನ ಪೊಲೀಸರು ನನ್ನನ್ನು ಎನ್‌ಕೌಂಟರ್‌ನಲ್ಲಿ ಮುಗಿಸುವ ಯೋಜನೆ ಮಾಡಿದ್ದಾರೆ ಎಂಬ ಸುಳಿವು ಸಿಕ್ಕ ನಂತರ ನಾನು ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾಪತ್ತೆಯಾಗಿದ್ದೆ” ಎಂದು ವಿಶ್ವ ಹಿಂದೂ ಪರಿಷತ್‌ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷರಾದ್ ಪ್ರವೀಣಬಾಯ್ ತೊಗಾಡಿಯಾರವರು ಸುದ್ದಿವಾಹಿನಿಯ ಮುಂದೆ ಕಣ್ಣೀರು ಸುರಿಸಿತ್ತಾ ತಾವು ಎದುರಿಸುತ್ತಿರುವ ದಾರುಣ ಪರಿಸ್ಥಿತಿಯನ್ನು ಬಿಚ್ಚಿಟ್ಟರು.

ಪ್ರವೀಣಬಾಯ್ ತೊಗಾಡಿಯಾ ಅವರು ನಿನ್ನೆ ಸೋಮವಾರ ನಾಪತ್ತೆಯಾಗಿದ್ದು ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದರು. ಇಂದು ಮಂಗಳವಾರ ಅವರು ಪತ್ರಿಕಾಗೋಷ್ಠಿ ನಡೆಸಿ ತಾವು ನಾಪತ್ತೆ ಆಗುವುದರ ಹಿಂದಿನ ಕಟು ಸತ್ಯವನ್ನು ವಿವರಿಸಿದರು.

“ನನ್ನ ಧ್ವನಿಯನ್ನು ಶಾಶ್ವತವಾಗಿ ಮೌನಗೊಳಿಸುವ ಹುನ್ನಾರದ ಭಾಗವಾಗಿ ನನ್ನನ್ನು ರಾಜಸ್ಥಾನ್‌ ಪೊಲೀಸರು ಎನ್‌ಕೌಂಟರ್‌ ಮಾಡಿ ಮುಗಿಸಲಿದ್ದಾರೆ ಎಂದು ಯಾರೋ ಒಬ್ಬರು ನನಗೆ ತಿಳಿಸಿದರು; ಎನ್‌ಕೌಂಟರ್‌ನಿಂದ ತಪ್ಪಿಸಿಕೊಳ್ಳಲು ನಾನು ನಾಪತ್ತೆಯಾಗಬೇಕಾಯಿತು” ಎಂದು ಪ್ರವೀಣಬಾಯ್ ಅವರು ಹೇಳಿದರು.

“ನಾನು ಯಾವತ್ತೂ ರಾಮ ಮಂದಿರ, ಗೋ ಹತ್ಯಾ ನಿಷೇಧ ಕಾನೂನು, ರೈತ ಕಲ್ಯಾಣ ಯೋಜನೆಗಳು ಮುಂತಾದವುಗಳ ಬಗ್ಗೆ ನಾನು ಮಾತನಾಡುತ್ತಿದ್ದೆ. ಎನ್‌ಕೌಂಟರ್‌ ಮೂಲಕ ನನ್ನ ಧ್ವನಿಯನ್ನು ಅಡಗಿಸುವ ಯತ್ನ ನಡೆದಿದೆ” ಎಂದು ಪ್ರವೀಣಬಾಯ್ ತೊಗಾಡಿಯಾ ತಿಳಿಸಿದರು.

ವೈದ್ಯರ ಪ್ರಕಾರ ಪ್ರವೀಣಬಾಯ್ ತೊಗಾಡಿಯಾ ಅವರ ಆರೋಗ್ಯ ಸುಧಾರಿಸಿದೆ, ಆದರೆ ಪ್ರವೀಣಬಾಯ್ ತೊಗಾಡಿಯಾ ಅವರು ನನ್ನ ಆರೋಗ್ಯ ಪೂರ್ಣವಾಗಿ ಸುಧಾರಿಸುವ ತನಕ ನಾನು ಆಸ್ಪತ್ರೆಯಿಂದ ಹೋಗುವುದಿಲ್ಲ ಎಂದು ಹೇಳಿದರು. ತೊಗಾಡಿಯಾ ಅವರಿಗೆ ಝಡ್‌ ಪ್ಲಸ್‌ ಕೆಟಗರಿಯ ರಕ್ಷಣೆ ಇದೆ.

ಹತ್ತು ವರ್ಷಗಳ ಹಿಂದಿನ ಕೇಸಿಗೆ ಸಂಬಂಧಿಸಿ ರಾಜಸ್ಥಾನದ ಪೊಲೀಸರ ತಂಡ ನಗರದ ಪಾಲ್ಡಿ ಪ್ರದೇಶದಲ್ಲಿನ ವಿಶ್ವ ಹಿಂದು ಪ್ರಧಾನ ಕಾರ್ಯಾಲಯಕ್ಕೆ ಪ್ರವೀಣಬಾಯ್ ತೊಗಾಡಿಯಾ ಅವರನ್ನು ಅರೆಸ್ಟ್‌ ಮಾಡಲು ನಿನ್ನೆ ಸೋಮವಾರ ಬಂದಿದ್ದಾಗ ತೊಗಾಡಿಯಾ ವಿಹಿಂಪ ಕಾರ್ಯಾಲಯದಿಂದ ಹೊರಬಿದ್ದು ನಾಪತ್ತೆಯಾಗಿದ್ದರು.

  • 620
    Shares