ಮೋದಿಜಿಯನ್ನು ಆರೋಪಿಸುವ ಮುನ್ನ ಓದಲೇ ಬೇಕಾದ ಲೇಖನ..!! ಹಿಂದೂಗಳೇ ಎಚ್ಚರ ತಪ್ಪಿದರೇ ಅನಾಹುತ ಆಗುವುದು ಶತಃಸಿದ್ದ..!!

ಕಳೆದ ಎರಡು ಮೂರು ದಿನಗಳಿಂದ ರಾಷ್ಟ್ರ ರಾಜಕಾರಣದಲ್ಲಿ ಅಲ್ಲೊಲ ಕಲ್ಲೋಲ ಏರ್ಪಟ್ಟಿದೆ. ದೇಶಕ್ಕೆ ನ್ಯಾಯ ಒದಗಿಸುವ ನ್ಯಾಯಾಧೀಶರು ಜನರ ಮುಂದೆ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಆದಾದ ಮೇಲೆ ಗೊತ್ತಾಯಿತು, ಮೋದಿಜಿಯವರನ್ನು ತುಳಿಯಲು ಕಾಂಗ್ರೇಸ್ ಮಾಡಿದ ಪಿತುರಿಯಂದು.

ಮೋದಿಜಿಯನ್ನು ನೇರವಾಗಿ ಎದುರಿಸಲಾಗದೆ. ತಮ್ಮ ಮಾತನ್ನು ಕೇಳುವ ಗಂಜಿ ಗಿರಾಕಿಗಳ ಮೂಲಕ ಮೋದಿಜಿ ಹೆಸರಿಗೆ ಮಸಿ ಬಳೆಯುವ ಹುನ್ನಾರ ನಡೆಸಿವೆ. ಆದರೆ ಮೋದಿಜಿ ಮುಂದೆ ಇವರ ಆಟಾಟೋಪಗಳು ನಡೆಯೋದೆ ಇಲ್ಲಾ. ಬಿಡಿ ಈ ಕಾಂಗ್ರೇಸ್ ನವರು ಸುಮ್ಮನೆ ವ್ಯರ್ಥ ಪ್ರಯತ್ನ ಮಾಡಿ, ಸುಖಾಸುಮ್ಮನೆ ಮಾಧ್ಯಮಗಳ TRP ಹೆಚ್ಚಿಸುವುದರ ಜೊತೆ ದೇಶದ ಜನರ ನೆಮ್ಮದಿಯನ್ನು ಹಾಳು ಮಾಡಿತ್ತಿದ್ದಾರೆ..

ನೇರವಾಗಿ ವಿಷಯಕ್ಕೆ ಬರತಿನಿ, ಈಗ ನಾನು ಹೇಳ ಹೊರಟಿರುವ ವಿಷಯ ಅತ್ಯಂತ ಗಂಭೀರ ಸ್ವರೂಪದ್ದಾಗಿದೆ. ಸ್ವಲ್ಪ ಯಾಮಾರಿದರೂ ಹಿಂದೂಗಳಿಗೆ ಜೀವನ ಸರ್ವನಾಶವಾಗೋದು ಕಟ್ಟಿಟ್ಟ ಬುತ್ತಿ..!! ಹೌದು ಈ ವಿಷಯ ಅಷ್ಟು ಸೂಕ್ಷ್ಮವಾಗಿದೆ.

ಕಳೆದ ಎರಡು ದಿನಗಳಿಂದ ಹಿಂದೂಗಳ ಹೃದಯ ಸಾಮ್ರಾಟ್ ವಿಶ್ವ ಹಿಂದೂ ಪರಿಷದ ನ ಅಂತರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾದ ಪ್ರವೀಣಬಾಯ್ ತೋಗಾಡಿಯಾ ಜಿ ಕುರಿತು ಕಾಣೆಯಾದ ಕುರಿತು ವದಂತಿಗಳು, ಆಸ್ಪತ್ರೆಯಲ್ಲಿ ದಾಖಲಾದ ಚಿತ್ರಗಳು, ಹಿಂದೂಗಳ ಕರಳು ಕಿತ್ತು ಬರುವಂತೆ ಆಗಿದೆ. ನನಗಂತೂ ಅವರು ಕಾಣೆಯಾದ ಸುದ್ದಿ ತಿಳಿದ ತಕ್ಷಣ ಬರಸಿಡಿಲು ಬಡಿದಂತಾಗಿ ಕಣ್ಣಲ್ಲಿ ಗಂಗಾ ಮಾತೆ ದುಮ್ಮಿಕ್ಕಿದಳು..!! ಯಾಕೆಂದರೆ ಹಿಂದೂತ್ವ, ಹಿಂದೂಗಳಿಗಾಗಿ ಆ ಜೀವ ಅಷ್ಟು ಶ್ರಮ ಪಟ್ಟಿದೆ. ನಿಜವಾಗಿಯೂ ಹಿಂದೂತ್ವದ ಬೆಂಕಿ ಚೆಂಡು ನಮ್ಮ ಪ್ರವೀಣಬಾಯ್ ತೋಗಾಡಿಯಾ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಪ್ರವೀಣಬಾಯ್ ತೋಗಾಡಿಯಾ ಅವರು ಕೊಟ್ಟ ಹೇಳಿಕೆ ಹಿಂದೂಗಳ ಮನಸ್ಸಿನಲ್ಲಿ ಬಿರುಗಾಳಿ ಎಬ್ಬಿಸಿರುವುದು ನೂರಕ್ಕೆ ನೂರು ಸತ್ಯ.. ಹಿಂದೂತ್ವಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ಆ ಧರ್ಮ ಯೋಧನಿಗೆ “ಏನ್ಕೌಂಟರ್” ಮಾಡಲು ಆದೇಶವಾಗಿದೆ ಎಂದು ಮಾಧ್ಯಮಗಳ ಮುಂದೆ ಆ ಪುಣ್ಯಾತ್ಮ ಕಣ್ಣಿರಿಟ್ಟಿದ್ದು ನನ್ನ ಕಣ್ಣಿನಿಂದ ನೋಡಲಾಗದೇ ಟಿವಿಯನ್ನು ಬಂದು ಮಾಡಿದೆ.

ಅದ್ಯಾವ ಕಾಣದ ಕೈಗಳು ಇದರ ಹಿಂದಿವೇ ಎಂದು ನನಗೆ ಗೊತ್ತಿಲ್ಲ, ಆದರೆ ಆ ಕಾಣದ ಕೈಗಳಿಗನ್ನು ಕಟು ಶಬ್ದಗಳಿಂದ ನಿಂದಿಸುತ್ತೇನೆ. ಗುಜರಾತ್, ರಾಜಸ್ಥಾನ ಮತ್ತು ಕೇಂದ್ರದಲ್ಲಿ ನಮ್ಮದೇ ಸಂಘ ಪರಿವಾರದ ಪಕ್ಷ ಆಡಳಿತದಲ್ಲಿ ಇರುವಾಗ, ಇದೆಲ್ಲಾ ಹೇಗಾಯಿತು ಎಂದು ಪ್ರಶ್ನೆ ನಮ್ಮಲ್ಲಿ ಮೂಡುವುದು ಸರ್ವೇ ಸಾಮಾನ್ಯ. ಆದರೇ ಇದನ್ನೇ ಅಸ್ತ್ರವಾಗಿ ಬಳಿಸಿಕೊಳ್ಳುವ ಕಾಂಗ್ರೇಸ್ ನವರು ನಮ್ಮ ಹಿಂದೂ ಹುಲಿಯನ್ನು ಬೇಟಿ ಮಾಡಿ ಕಣಿಕರ ತೋರಿಸುತ್ತಿದ್ದಾರೆ..!!

ವ್ಹಾ ವ್ಹಾ‌‌.. ಕಾಂಗಿಗಳೇ ಮೆಚ್ಚಿದೆ ನಿಮ್ಮ ಹಿಂದೂತ್ವದ ಮೇಲಿನ ಪ್ರೀತಿಯನ್ನು‌.‌. ಕರ್ನಾಟಕದಲ್ಲಿ ನಿಮ್ಮದೇ ಕಾಂಗ್ರೇಸ್ ಪಕ್ಷ ಆಡಳಿತದ್ದು, 21 ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆಯಾದಾಗ ತಿರುಗಿಯೂ ನೋಡದ ನೀವು, ರಾಜಸ್ಥಾನ, ಗುಜರಾತ್ ಹಾಗೂ ಕೇಂದ್ರದಲ್ಲಿ ಭಾಜಪ ಪಕ್ಷದ ಸರಕಾರ ಇರುವುದನ್ನು ಖಚಿತ ಪಡಿಸಿಕೊಂಡು.. ನಮ್ಮ ಹಿಂದೂ ಹುಲಿ ಪ್ರವೀಣಬಾಯ್ ತೋಗಾಡಿಯಾ ಜಿ ಹೇಳಿದ “ಸುಮಾರು ಹತ್ತು ವರ್ಷದ ಹಳೆಯ ಕೇಸ್ ಒಂದರಲ್ಲಿ ನನ್ನ ಬೆನ್ನಿಗೆ ಬಿದ್ದಿದ್ದ ರಾಜಸ್ಥಾನ ಪೊಲೀಸರು ನನ್ನನ್ನು ಎನ್‌ಕೌಂಟರ್‌ನಲ್ಲಿ ಮುಗಿಸುವ ಯೋಜನೆ ಮಾಡಿದ್ದಾರೆ ಎಂಬ ಸುಳಿವು ಸಿಕ್ಕ ನಂತರ ನಾನು ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾಪತ್ತೆಯಾಗಿದ್ದೆ” ಎಂಬ ಹೇಳಿಕೆಯನ್ನು ಮುಂದಿಟ್ಟಕೊಂಡು ಈಗ ನಾಟಕವಾಡಲೂ ಬಿಂದಿದ್ದಿರೋ..??

ಕಾಂಗ್ರೇಸ್ ನವರಿಗೆ ನನ್ನ ಪ್ರಶ್ನೇ ಇದೇ ಹೇಳಿಕೆಯನ್ನು ಕರ್ನಾಟಕದ ಹಿಂದೂ ಹುಲಿ ಪ್ರಮೋದ ಮುತಾಲಿಕ್ ಜಿ ಹೇಳಿದ್ದರೆ..!!?? ನೀವು ಅವರನ್ನು ಬೇಟಿಯಾಗುತ್ತಿದ್ದರಾ..?? ಅಯ್ಯೋ ಸ್ವಾಮಿ ಕಾಂಗ್ರೇಸ್ ನವರ ನರಿ ಬುದ್ದಿ ನಮಗೆ ಗೊತ್ತು ಸ್ವಾಮಿ. ತೋಗಾಡಿಯಾ ಜಿ ಆರೋಪಿಸಿದ ರಾಜ್ಯದಲ್ಲಿ ಭಾಜಪ ಸರಕಾರವಿದೆ ಎಂಬ ಒಂದೇ ಒಂದು ಉದ್ದೇಶವನ್ನು ಇಟ್ಟಕೊಂಡು ಮೋದಿಜಿ ಮತ್ತು ಭಾಜಪವನ್ನು ವಿರೋಧಿಸುವ ಸಲುವಾಗಿ ನಮ್ಮ ಹಿಂದೂ ನಾಯಕ ಪ್ರವೀಣಬಾಯ್ ತೋಗಾಡಿಯಾ ಅವರನ್ನು ಬೇಟಿಯಾಗಿದ್ದಿರಿ ಹೊರತು ಅವರ ಮೇಲಿರುವ ಕಾಳಜಿಯಿಂದ ಅಲ್ಲವೇ ಅಲ್ಲಾ.

ಇಂತಹದೇ ಸಮಯಕ್ಕಾಗಿ ಕಾದು ಕುಳಿತಿದ್ದ ಕಾಂಗ್ರೇಸ್ಸಿನವರು, ಇದೇ ಸುವರ್ಣಾವಕಾಶ ಅಂತ ಅವಕಾಶವನ್ನು ಬಳಿಸಿಕೊಂಡು “ನಾವು ಹಿಂದೂಗಳು, ನಮಗೂ ಹಿಂದೂಗಳ ಮೇಲೆ ಕಾಳಜಿ ಇದೆ” ಅಂತ ದೇಶಕ್ಕೆ ತೋರಿಸಿಕೊಡಲು ಹೊರಟಿದ್ದಾರೆ. ಆದರೆ ದೇಶದ ಜನರಿಗೆ ಕಾಂಗ್ರೇಸ್ಸಿನ ಕರಾಳ ಮುಖದ ಪರಿಚಯವಾಗಿದೆ. ಕಾಂಗ್ರೇಸ್ ಡೊಂಗಿ ಹಿಂದೂತ್ವಕ್ಕೆ ಹಿಂದೂಗಳು ಯಾವತ್ತಿಗೂ ಮಾರು ಹೋಗಲ್ಲ, ಹೋಗುವುದೇ ಇಲ್ಲಾ, ಕಾಂಗ್ರೇಸ್ಸಿನ ಡೊಂಗಿ ಹಿಂದೂತ್ವಕ್ಕೆ ಮರಳಾಗಲೇ ಬಾರದು.. ಇನ್ನೊಂದು ಮುಖ್ಯ ವಿಷಯ ಸ್ನೇಹಿತರೇ..

ಸ್ವಾಮಿ ಇಷ್ಟಕ್ಕೆ ಮುಗಿದಿಲ್ಲಾ, ಪ್ರಮುಖವಾದ ವಿಷಯ ಈಗ ಶುರುವಾಗುತ್ತೆ ಬನ್ನಿ..

ಹೌದು..!! ನಿಜವಾದ ಘಟ್ಟ ಇಲ್ಲಿದೆ.. ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದರಲ್ಲಿ ಇದರ ಬಗ್ಗೆ ಚರ್ಚೆ..!! ಪ್ರವೀಣಬಾಯ್ ಬಂಧನ..?? ಹಿಂದೂ ಹುಲಿ ಪ್ರವೀಣಬಾಯ್ ಕಾಣೆಯಾಗಿದ್ದಾರೆ..!? ನಂತರ ತೋಗಾಡಿಯಾ ಜಿ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಿಕ್ಕಿದ್ದು, ಅದಾದ ಮೇಲೆ ಪ್ರವೀಣಬಾಯ್ ಜಿ ಮಾಧ್ಯಮಗಳ ಮುಂದೆ ” ಏನ್ಕೌಂಟರ್ ಮಾಡಿ ಮುಗಿಸುವ ಪ್ರಯತ್ನ ಮಾಡ್ತಾ ಇದಾರೆ” ಪೋಸ್ಟಗಳು ಹರಿದಾಡಿದ್ದವು.

ಇದರ ಸತ್ಯಾಸತ್ಯತೆ ಬಗ್ಗೆ ನನಗೆ ನಿಖರವಾದ ಮಾಹಿರಿ ಇಲ್ಲ ಆದ್ರೆ ಇದನ್ನೇ ಉಪಯೋಗಿಸಿಕೊಂಡು ಕೆಲವರು ಮೋದಿಜಿ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ಆರೋಪ ಎಷ್ಟು ನಿಜವೋ ಸುಳ್ಳೋ ನನಗಂತೂ ಗೊತ್ತಿಲ್ಲ. ಆದರೆ ಇದನ್ನೇ ಅಸ್ತ್ರವಾಗಿ ಉಪಯೋಗಿಸುತ್ತಿರುವ ಕಾಂಗ್ರೇಸ್ಸಿನ ಅವಕಾಶಾವಾದಿ ನಾಲಾಯರು ಮೋದಿಜಿ ಪ್ರತಿಷ್ಟೆಗೆ ಮಸಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

ಇದರ ಜೊತೆಗೆ ಹಿಂದೂಗಳ ನಾವು ಸಹ ಮೋದಿಜಿಯನ್ನು ವಿರೋಧಿಸುತ್ತಿದ್ದೇವೆ. ಮತ್ತು ನನ್ನ ಬೆಂಬಲ ಪ್ರವೀಣಬಾಯ್ ತೋಗಾಡಿಯಾ ಅವರಿಗೆ ಅಂತ ಪೋಸ್ಟ ಮಾಡಿ ಮೋದಿಜಿ ಮತ್ತು ಭಾಜಪವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರ ನಡೆದಿದೆ. ಆದರೆ ಹಿಂದೂಗಳಾದ ನಾವೇ ನಮ್ಮ ಹೆಮ್ಮೆಯ ನಾಯಕರನ್ನು ಬಿಟ್ಟು ಕೊಟ್ಟರೆ ಹೇಗೆ..?? ಹಾಗಾದರೆ ಮೋದಿಜಿ ಇಷ್ಟೆಲ್ಲಾ ಮಾಡುತ್ತಿರುವುದಾದರೂ ಯಾರ ಸಲುವಾಗಿ..?? ಅವರಿಗೇನು ಮನೆ ಇದಯೇ..?? ಅಥವಾ ಮಕ್ಳಳಿದ್ದಾರೆ..?? ಹು ಹೂ ಇಲ್ಲವೇ ಇಲ್ಲಾ ರಿ. ನೋಟ್ ಬ್ಯಾನ್, ತ್ರಿವಳಿ ತಲಾಖ್ ಬ್ಯಾನ್, ‌ನಿನ್ನೆ ತಾನೆ ಹಜ್ ಯಾತ್ರೆಯ ಮೇಲಿನ ವಾರ್ಷಿಕ 700 ಸಬ್ಸಿಡಿ ಬ್ಯಾನ್ ಮಾಡಿದ್ರು. ಇದೆಲ್ಲ ಆ ಪುಣ್ಯಾತ್ಮ ಯಾರಿಗಾಗಿ ಮಾಡುತ್ತಿದ್ದಾರೆ..??

ಕೆಲವರು ಹೇಳ್ತಾ ಇದಾರೆ, ಮೋದಿ ಮೊದಲಿನ ಹಾಗೆ ಹಿಂದೂತ್ವವಾದಿಯಾಗಿ ಉಳಿದಿಲ್ಲಾ, ಜಾತ್ಯಾತೀತರಾಗಿದ್ದಾರೆ ಅಂತ ಅಯ್ಯೋ ಸ್ವಾಮಿ, ನೀವು ಹೇಳಿದ ಹಾಗೆ ಆಗಿದ್ರೆ ತಲಾಖ್, ಹಜ್ ಸಬ್ಸಿಡಿ ಇಂತಹ ಮಹತ್ವದ ನಿರ್ಧಾರವನ್ನು ತಗೆದುಕೊಂಡು ಮುಸ್ಲಿಂ ಸಮುದಾಯವನ್ನು ಎದುರು ಹಾಕಿಕೊಳ್ಳುವ ಅವಶ್ಯಕತೆ ಏನಿತ್ತು..?? ಕಾಂಗ್ರೇಸ್ಸಿನಂತೆ ಓಲೈಕೆ ಮಾಡುತ್ತಾ ಹೋಗಬಹುದಿತ್ತಲ್ಲವೇ..?? ಅದು ಬಿಡಿ ಮೋದಿಯೇ ಅಪರಾಧಿ ಹೇಳೋ ನೀವುಗಳು ಮೋದಿಜಿಯಲ್ಲಿ ಅಂತಹ ಯಾವ ತಪ್ಪು ಕಂಡ್ಡಿದ್ದಿರಿ..?? ಒಂದು ವೇಳೆ ತನ್ನ ವಿರೋಧಿಗಳನ್ನು ಮೋದಿ ಮಟ್ಟಹಾಕುವುದಾದರೇ, ಏನ್ಕೌಂಟರ್ ಮಾಡಿಸಲು ಪ್ರಯತ್ನ ಪಟ್ಟಿದ್ದರೆ ಇಷ್ಟೊತ್ತಿಗೆ ದೇಶದಲ್ಲಿ ಯಾರೋಬ್ಬರು ಮೋದಿ ವಿರುದ್ಧ ಮಾತನಾಡಲು ಬಾಯಿ ಸಹ ಇರುತ್ತಿರಲಿಲ್ಲಾ. ಆ ರೀತಿ ಮಾಡ್ತಾ ಇದ್ದರು ಮೋದಿಜಿ.

ದಿನ ನಿತ್ಯ ಏಕವಚನದಲ್ಲೇ ಸಂಭೋದಿಸುವ ಶತ್ರುಗಳನ್ನೇ ಸಾಯಿಸುವ ಬಗ್ಗೆ ಯೋಚಿಸದ ಪುಣ್ಯಾತ್ಮ ಮೋದಿಜಿ, ಹಿಂದೂತ್ವ, ಹಿಂದೂರಾಷ್ಟ್ರ ಎಂದು ಹೋರಾಡುತ್ತಿರುವ ನಮ್ಮ ಹಿಂದೂ ಬೆಂಕಿ ಚೆಂಡಿನನ್ನು ಕೊಲ್ಲುವ ಪ್ರಯತ್ನ ಮಾಡುತ್ತಾರೆಯೇ..?? ನೋ ನೆವರ್ ಯೋಚಿಸುವುದಕ್ಕೂ ಸಾಧ್ಯವಿಲ್ಲ. ಒಂದು ವೇಳೆ ಮೋದಿ ಜಾತ್ಯಾತೀತರಾಗಿದ್ದರೇ ಉತ್ತರ ಪ್ರದೇಶದಲ್ಲಿ ಯೋಗಿಜಿ ಕೇಸರಿಕರಣ ಮಾಡುತ್ತಿದ್ದರೆ..?? ಮೋದಿಜಿಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಮೊದಲು ಸ್ವಲ್ಪ ಯೋಚಿಸಿ..

ಹಿಂದೂಗಳಿಗೆ ಅಂತ ಇರುವುದು ಭಾಜಪ ಪಕ್ಷ ಮಾತ್ರ, ಇದು ಜಗತ್ತಿನ ಅತಿ ದೊಡ್ಡ ಪಕ್ಷವು ಹೌದು. ಭಾಜಪ ದೇಶದ 19 ರಾಜ್ಯದಲ್ಲಿ ಸರಕಾರ ನಡೆಸುತ್ತಿದ್ದರೆ ಎಂದರೇ ಅದಕ್ಕೆ ಪ್ರವೀಣಬಾಯ್ ತೋಗಾಡಿಯಾ, ಮೋಹನ್ ಭಾಗವತ್ ರಂತಹ ಹಿಂದೂತ್ವಕ್ಕಾಗಿ ಹೋರಾಡುತ್ತಿರುವ ಹಿಂದೂ ನಾಯಕರ ಭಿಕ್ಷೆ ಎಂದರೇ ತಪ್ಪಾಗಲಾರದು. ನಮ್ಮ ಒಗ್ಗಟ್ಟನ್ನು ಒಡೆದು ಮತ್ತೆ ಅಧಿಕಾರದ ಗದ್ದುಗೆಗೆ ಏರಳು ಕುತಂತ್ರಿ ಕಾಂಗ್ರೇಸ್ ಏನಾದರೂ ಹೊಂಚು ಹಾಕಿದೆಯಾ.?? ಅಂತ ನಾವು ಒಂದು ಕ್ಷಣ ಯೋಚನೇ ಮಾಡಲೇಬೇಕು. ಯಾಕೆಂದರೆ ಸದ್ಯ ಕರ್ನಾಟಕದ ಚುನಾವಣಾ ಬರುತ್ತಿದೆ. ಇದೇ ವಿಷಯವನ್ನು ಇಟ್ಟುಕೊಂಡು ನಾವೇನಾದರೂ ಭಾಜಪಕ್ಕೆ ಮತ ಹಾಕದೇ ಇದ್ದರೇ ಮತ್ತದೆ ಹಿಂದೂ ವಿರೋಧಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದು, ಮತ್ತೆ ಸಾಲು ಸಾಲು ಹತ್ಯೆಯಾದರೆ ಅದಕ್ಕೆ ನೇರವಾಗಿ ಹಿಂದೂಗಳೇ ಕಾರಣವಾಗಬೇಕಾದಿತು ಜೋಕೆ..!!

ಇಷ್ಟೆಲ್ಲಾ ಹೇಳತಾ ಇದಿನಿ ಅಂದ್ರೆ ನಾನು ಭಾಜಪದ MP, MLA ಅಲ್ಲಾ, ಭಾಜಪದಲ್ಲಿ ಯಾವುದೇ ಜವಾಬ್ದಾರಿಗಳಿಲ್ಲಾ.. ನನಗೆ ಮೊದಲು ಧರ್ಮ, ನಂತರ ಪಕ್ಷ. ಆದರೆ ಇದೊಂದು ತುಂಬಾ ಸೂಕ್ಷ್ಮ ವಿಚಾರವಾಗಿರುವುದರಿಂದ ನನಗೆ ತಿಳಿದಿದ್ದು ಹೇಳಬೇಕೆನಿಸಿತು, ಒಂದು ವೇಳೆ ಉದ್ವೇಗದಿಂದ ನಾವು ಮೋದಿ, ಭಾಜಪವನ್ನು ವಿರೋಧಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಯಾಕೆಂದರೆ ಸ್ವತಂತ್ರ ಪೂರ್ವ ವಿದೇಶಿ ಆಕ್ರಮಣಕಾರರ ಗುಲಾಮಗಿರಿಯಲ್ಲಿದ್ದರೆ, 70 ವರ್ಷ ವಿದೇಶಿ ಮನಸ್ಥಿಯ ಕೆಳಗೆ ಹಿಂದೂಗಳನ್ನು ಗುಲಾಮರಂತೆ ನೋಡಿಕೊಂಡಿರುವುದು ನಮಗೆಲ್ಲಾ ತಿಳಿದ ವಿಚಾರ. ಒಂದು ಮನೆ ಅಂದಮೇಲೆ, ವೈಮನಸ್ಸು, ಮನಸ್ಥಾಪ ಬರುವುದು ಸಾಮನ್ಯ, ಇಂತಹ ವಿಷಯಗಳನ್ನೇ ದೊಡ್ಡದು ಮಾಡಿ ನಮ್ಮ ಶತ್ರುಗಳ ಬಾಯಿ ಚಪಲಕ್ಕೆ ನಾವು ಗುರಿಯಾಗಬಾರದು.

ಭಾರತ ಒಂದು ಹೃದಯವಾದರೇ, ಹಿಂದೂ ಸಂಘಟನೆಗಳು ನಮ್ಮ ದೇಹ ಇದ್ದ ಹಾಗೆ, ದೇಹ ಮತ್ತು ಹೃದಯದ ನಡುವೇ ವ್ಯವಸ್ಥಿತವಾಗಿ ರಕ್ತ ಸಂಚಾರ ಮಾಡಲು ಸಹಕರಿಸುವ ಅಂದರೇ ದೇಶವನ್ನು ಆಳುವ ಅಂಗವೇ ನಮ್ಮ ರಕ್ತನಾಳಗಳು. ಇಲ್ಲಿ ಯಾವುದಕ್ಕೆ ತೊಂದರೆಯಾದರೂ ನೋವು ಅನುಭವಿಸಿವುದು ಹಿಂದೂಗಳಾದ ನಾವೇ.. ದುಡುಕುವ ಮುನ್ನ ಯೋಚಿಸಿ

ನಾನು ನಿಮ್ಮಂತೆಯೇ ಸಂಘದ ಸ್ವಯಂ ಸೇವಕ, ಪಕ್ಷದ ಕಾರ್ಯಕರ್ತ ನನ್ನ ಮನಸ್ಸಿನಲ್ಲಿರುವುದು, ನನಗೆ ತಿಳಿದಿದ್ದು ನಾನು ಹೇಳಿದ್ದೇನೆ. ಮುಂದಿನ ಆಯ್ಕೆ ನಿಮ್ಮದು..

ನಾನು ಹೇಳಿದ್ದು ಸರಿ ಅನಿಸಿದರೆ ಎಲ್ಲ ಹಿಂದೂಗಳಿಗೆ ಈ ಲೇಖನವನ್ನು ತಲುಪಿಸುವ ಜವಾಬ್ದಾರಿ ನಿಮ್ಮದು..

ಜೈ ಶ್ರೀರಾಮ
ಜೈ ಹಿಂದ್

ಕುಮಾರ ಮ.