ಮಾರ್ಕೋಸ್ ಕಮಾಂಡೋ ಫೋರ್ಸ್ ಕಾರ್ಯವೈಖರಿ ಬಗ್ಗೆ ತಿಳಿದರೆ ನಿಜಕ್ಕೂ ನೀವು ದಂಗಾಗುತ್ತಿರಾ..!!

ಭಾರತ ವಿಶ್ವ ಗುರು ಆಗಲಿಕ್ಕೆ ಆ ಪಕ್ಷವೇ ಬೇಕು ಈ ಪಕ್ಷವೇ ಬೇಕು ಎಂದು ಕೂಗುವ ಕರುಳನ್ನು ಹಾಗೆಯೇ ಸಿಂಬೆ ಸುತ್ತಿ ಪಕ್ಕಕ್ಕಿಟ್ಟು ಸುಮ್ಮನೆ ಒಂದು ಸುತ್ತು ಮಿಲಿಟರಿಯ ಕಡೆ ಹೊರಡೋಣ !

ಭಾರತದ ರಕ್ಷಣೆಗಾಗಿ ಈಗಾಗಲೇ ಮರೀನ್ ಕಮಾಂಡೋ ಫೋರ್ಸ್ ಗುಂಪು ಇತ್ತು ಅದನ್ನು ಮುಂದಿನ ದಿನಗಳಲ್ಲಿ ಮಾರ್ಕೋಸ್ ಕಮಾಂಡೋ ಫೋರ್ಸ್ ಎಂದು ಬದಲಿಸಲಾಗಿತ್ತು ಅದಾದ ನಂತರ 2012 ರಿಂದ ಇತ್ತೀಚಿಗೆ ಅಮೇರಿಕಾ ಹಾಗೂ ಇಸ್ರೇಲಿನ. ಸಹಯೋಗದೊಂದಿಗೆ ಇಸ್ರೇಲಿನ ಸೈರಾಟ್ ಮಟ್ಕಲ್ ಎಂಬ ಅಪಾಯಕಾರಿ ಪಡೆಯ ತತ್ಸಮಾನ ತರಬೇತಿಯನ್ನು ಕೊಟ್ಟು ಅತ್ಯದ್ಭುತಗೊಳಿಸಲಾಗಿದೆ !

ಇದಕ್ಕೆ ಸೆಲೆಕ್ಟ್ ಆದವರು ,ನಾವು ಈ ಕಮಾಂಡೋ ಟೀಮಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಮನೆಯವರಿಗೂ ತಿಳಿಸುವಂತಿಲ್ಲ.

ವಿಶಾಖಪಟ್ಟಣಂ ನಲ್ಲಿನ ಐ,ಎನ್,ಎಸ್ ಕರ್ಣ ಎಂಬ ಸ್ಥಳ ಇವರ ಮೂಲ ತೀರ್ಥಕ್ಷೇತ್ರ !

ಪಾಕಿಸ್ತಾನ ಹಾಗೂ ಪಂಜಾಬಿನ ನಡುವೆ ಸಿಂಧೂ ನದಿಯು ಅರೇಬಿಯನ್ ಸಮುದ್ರದ ಕಡೆಗೆ ಹರಿಯುತ್ತದೆ ಈ ಈ ನದಿಗೆ ಪೂರಕವಾದ ಇಂಡಸ್,ಝೀಲಮ್,ಚೀನಾಬ್,ರಾವಿ,ಬಿಯಾಸ್,ಸಟ್ಲೇಜ್ ಈ ಐದೂ ನದಿಗಳು ಪಾಕಿಸ್ತಾನದತ್ತ ಹರಿಯುವುದರಿಂದ ಈಗೀಗ ಹಲವು ಉಗ್ರರು ಸ್ಕೂಬಾ ಡೈವಿಂಗ್ ಎಂದರೆ ಆಕ್ಸಿಜನ್ ಸಿಲಿಂಡರ್ ಬಳಸಿಕೊಂಡು ನೀರಿನ ಮೂಲಕ ಭಾರತಕ್ಕೆ ನುಸುಳುತ್ತಿದ್ದಾರೆ ಎಂಬ ಮಾಹಿತಿಯನ್ನು ಹಿಡಿದು ಈ ಕಮಾಂಡೋ ಟೀಮನ್ನು ಈಗ ಅತ್ಯುತ್ತಮ ದರ್ಜೆಗೆ ಏರಿಸಲಾಗಿದೆ.

ಈ ನೇವಿ ಕಂಪೆನಿ ಈಗಾಗಲೇ ಹಲವು ಟೀಮುಗಳಾಗಿ ತಯಾರಾಗಿವೆ.

ಇವರಲ್ಲಿ ಕೆಲವು ಟೀಮುಗಳನ್ನು ಮುಂಬೈ, ವೈಜಾಗ್, ಕೊಚ್ಚಿ ಈ ಮೂರು ಪ್ರದೇಶಗಳಲ್ಲಿ ಈ ಮೊದಲು ಇರಿಸಲಾಗಿತ್ತು ಹಾಗೆಂದ ಮಾತ್ರಕ್ಕೆ ಇದೇ ಖಚಿತ ಜಾಗ ಅಂತೇನಿಲ್ಲ ಇಂಟಲಿಜೆನ್ಸ್ ಬ್ಯುರೋ ಮಾಹಿತಿಯ ಸೂಕ್ಷ್ಮ ಆಧಾರದ ಮೇಲೆ ಇವರ ಜಾಗ ಅಲ್ಲಲ್ಲಿಗೆ ಪ್ರತಿದಿನವೂ ಬದಲಾಗುತ್ತಾ ಸಾಗುತ್ತದೆ..!

ಈ ಟೀಮ್ ಗೆ ಸೇರಬೇಕೆಂದರೆ ಅಂತಿಂತಹಾ ಪರಿಶ್ರಮ ಸಾಲದು ಏಕೆಂದರೆ ಈ ಕಮಾಂಡೋ ಪಡೆಯ ಆಯ್ಕೆ ನೇವಿಯಲ್ಲಿನ ಅತ್ಯುತ್ತಮ ಪ್ಯಾರಾ ಕಾಮಾಂಡೋ ಟ್ರೈನಿಂಗ್ ಗಮನಿಸಿ ಅಲ್ಲಿ ಅತ್ಯುತ್ತಮ ಎನಿಸಿಕೊಂಡವರನ್ನು ಆರಿಸಿಕೊಳ್ಳಲಾಗುತ್ತದೆ ಅದೂ ಕೂಡ ವಯಸ್ಸು ‘ಇಪ್ಪತ್ತು’ ಇದ್ದರೆ ಮಾತ್ರ !

ಇವರು ಬೆಳಗಿನ ಜಾವ ಮೂರಕ್ಕೆ ಟ್ರೈನಿಂಗ್ ಜಾಗದಲ್ಲಿ ಖಚಿತವಾಗಿ ನಿಂತಿರಬೇಕು !
ಬೆಳಗಿನ ಜಾವಕ್ಕೆ ಎಚ್ಚರಗೊಳ್ಳಲು ಯಾವುದೇ ಅಲಾರಂ ಬಳಸುವಂತಿಲ್ಲ ಏಕೆಂದರೆ ಶತೃ ಬರುವವನೇನು ಅಲಾರಂ ತಂದು ಎರಡೂ ಮುಕ್ಕಾಲಿಗೇನೇ ಟಿರಿಣಿರಿಣಿರಿಣಿ ಅನ್ನಿಸಿ “ಅರೆ ಬಾಬ ಗನ್ ಪಕಡೋ ಭಾಯ್ !ಹಮೇ ವಾರ್ ಕರ್ನೇಕಾ ಹೈ”ಅಂತಲಾ ಹೇಳುತ್ತಾನೆ !!!

ಹಾಗಾಗಿ ಈ ಟೀಮ್ ಮಲಗಿದ್ದಾಗ ಕೇವಲ ಪುಟಾಣಿ ಗುಂಡು ಸೂಜಿಯ ಶಬ್ಧ ಕಿವಿಗೆ ಬಿದ್ದರೂ ಸಾಕು ಈ ಕಮಾಂಡೋನ ತೋರುಬೆರಳು ಅದಾಗಲೇ ಟ್ರಿಗರ್ ಮೇಲಿರುತ್ತದೆ ಅದೂ ಕೂಡ ಒಂದು ಸೆಕೆಂಡಿನ ಒಳಗಡೆ ಅಲ್ಲ !

ಗುಂಡುಸೂಜಿಯ ಶಬ್ಧ ಕಿವಿಗೆ ಬಿದ್ದ ಕೇವಲ 0.27ಸೆಕೆಂಡಿನ ಒಳಗೆ ಈ ಇಂಡಿಯನ್ ಮಾರ್ಕೋಸ್ ಕಮಾಂಡೋವಿನ ಕೈಯಲ್ಲಿರುವ ಇಸ್ರೇಲ್ ನಿರ್ಮಿತ Tavor TAR-21 ಮಷೀನ್ ಗನ್ನಿನಿಂದ ಶತೃವಿನ ತಲೆ ತೂತಾಂತೂತೆದ್ದು ಹೋಗುವುದರಲ್ಲಿ ಯಾವುದೇ ಅನುಮಾನ ಬೇಡ !

ಶತೃಗಳ ಅಥವಾ ಉಗ್ರರ ಆಟಾಟೋಪಕ್ಕೆ ಈ ಮಾರ್ಕೋಸ್ ಕಮಾಂಡೋನ ಪ್ರತಿಕ್ರಿಯೆ ಯಾವುದೇ ಪರಿಸ್ಥಿತಿಯಲ್ಲಿಯೂ ಕೂಡ ಕೇವಲ ಒಂದು ಸೆಕೆಂಡಿನ ಕಾಲು ಭಾಗ ಅಂದರೆ “0.27”ಸೆಕೆಂಡಿನ ಒಳಗಿರಬೇಕು !
ಅಂದರೆ ಉಗ್ರಗಾಮಿಯ ಕೈ ತಟಕ್ಕನೆ ಗನ್ನಿನ ಟ್ರಿಗರ್ ಝೋನ್ ತಲುಪುವುದರ ಒಳಗಾಗಿ ಮಾರ್ಕೋಸ್ ಬುಲೆಟ್ ಅದಾಗಲೇ ಉಗ್ರನ ತಲೆಗೆ ಢಮೀಲನೆ ತೂರಿರಬೇಕು ಅಷ್ಟೇ !

ಎಂಬುದು ಟ್ರೈನಿಂಗಿನ ಮೊದಲ ನಿಯಮ ಇದಕ್ಕಾಗಿ ಕೊಡಲ್ಪಡುವ ಟ್ರೈನಿಂಗ್ ಇದೆಯಲ್ಲಾ ಅದು ಸಾವಿಗೆ ಅತೀ ಸಮೀಪದ ಕಟ್ ರೂಟು ಇದೇ ಇರಬೇಕು ಎಂದೆನಿಸಿ ಹೈರಾಣಾಗಿಸಿಬಿಡುತ್ತದೆ !

“ಬೆಳಗಿನ ಜಾವಕ್ಕೆ ಎದ್ದ ಈ ಕಮಾಂಡೋಗಳು ಇಪ್ಪತ್ತು ಕಿಲೋಮೀಟರು ಉಸಿರುಕಟ್ಟಿಕೊಂಡು ಓಡಬೇಕಾಗುತ್ತದೆ ಯಾವುದೇ ಕಾರಣಕ್ಕೂ ಎಲ್ಲಿಯೂ ನೆಲದ ಮೇಲೆ ಕೂರುವಂತಿಲ್ಲ “ಇವರೆಲ್ಲರೂ ಓಡುತ್ತಾರೆ ಬಿಡು ಎಂದು ಯುಎಸ್ ನಿಂದಲೋ ಇಸ್ರೇಲಿನಿಂದಲೋ ಬಂದ ಟ್ರೈನರ್ ಎಲ್ಲಿಯೋ ಕಾಫಿ ಕುಡಿಯುತ್ತಾ ,ಬೈನಾಕ್ಯುಲರಿನಲ್ಲಿ ನೋಡುತ್ತಾ ನಿಲ್ಲುವುದಿಲ್ಲ !
ಆ ಟ್ರೈನರ್ ಇವರೆಲ್ಲರಿಗಿಂತ ಮುಂದೆ ಓಡುತ್ತಿರುತ್ತಾನೆ !

ಅದಾದ ಮರುದಿನ ನಿದ್ದೆಯ ಅಳತೆಯನ್ನು ಮತ್ತೂ ಒಂದು ಗಂಟೆ ಕಡಿಮೆ ಮಾಡಲಾಗುತ್ತದೆ ಅದರ ಜೊತೆಗೆ ಎಲ್ಲರ ಬೆನ್ನಿನ ಮೇಲೆ ಐದು ಕೆಜಿ ಮಿಲಿಟರಿ ಅಸೆಸರಿ ಬ್ಯಾಗ್ (ಗ್ಲಾಕ್ ಗನ್,ಗ್ರನೈಡ್ಸ್,ಮೆಡಿಕಲ್ ಫಸ್ಟ್ ಏಯ್ಡ್)ಇವೆಲ್ಲವನ್ನೂ ತುಂಬಿ ಮತ್ತೆ ಇಪ್ಪತ್ತು ಕಿಲೋಮೀಟರು ಓಡಿಸಲಾಗುತ್ತದೆ !

ದಿನಕಳೆದು ರಾತ್ರಿಗೆ ಬೆನ್ನ ಮೇಲಿನ ತೂಕವನ್ನು 60ಕೆಜಿಗೆ ಹೆಚ್ಚಿಸಲಾಗುತ್ತದೆ !

ತೂಕ ಹೊತ್ತ ಈ ಕಮಾಂಡೋಗಳು ಒಂದು ದಿನ ಸಮತಟ್ಟಾದ ನೆಲದ ಮೇಲೆ ಇಪ್ಪತ್ತು ಕಿಲೋ ಮೀಟರು ಓಡಿದರೆ ಮರುದಿನ ರಾತ್ರಿ ಟ್ರೆಕ್ಕಿಂಗ್ ನಂತಹಾ ಗುಡ್ಡಕ್ಕೆ ಓಡಬೇಕಾಗುತ್ತದೆ !

ಎರಡು ಕೆಜಿ ಪಾಪೂವನ್ನೇ ಹತ್ತುನಿಮಿಷ ಎತ್ತಿಕೊಂಡಿರಲಾಗದ ನಾವೆಲ್ಲಾ ದೇಶೋದ್ಧಾರದ ಮಾತನಾಡುವಾಗ ಇಂತಹಾ ವಿಚಾರಗಳನ್ನು ಕೇಳಿದರೆ ಕಪಾಳಕ್ಕೆ ಬಾರಿಸಿದಂತಾಗುತ್ತದೆ !

ದಿನದ ಇಪ್ಪತ್ತು ಗಂಟೆ ಸತತವಾಗಿ ಟ್ರೈನಿಂಗ್ ಮುಂದುವರೆಯುತ್ತಲೇ ಇರುತ್ತದೆ ಕೊನೆಗೆ ಮಿಕ್ಕ ನಾಲ್ಕು ಗಂಟೆ ಮಾತ್ರ ಮಲಗಬೇಕು ಹಾಗೂ ಈ ನಿದ್ದೆಯ ಅಳತೆಯನ್ನು ದಿನಕಳೆದಂತೆ ಬರುಬರುತ್ತಾ ಅದೆಷ್ಟು ಕಡಿಮೆಗೊಳಿಸುತ್ತಾರೆ ಎಂಬುದು ನೀವು ಸಾಮಾನ್ಯವಾಗಿ ಊಹಿಸಲಸಾಧ್ಯ !

ಈ ಕಠಿಣ ತರಬೇತಿಯು ವರ್ಷ ಕಳೆದ ನಂತರ ವಾರದಲ್ಲಿ ಕೇವಲ ಅರ್ಧ ಗಂಟೆ ಅಥವಾ ಒಂದು ಗಂಟೆ ಮಾತ್ರ ನಿದ್ರಿಸಲು ಕಲಿಸಲಾಗುತ್ತದೆ ಏಕೆಂದರೆ ಟ್ರೈನಿಂಗ್ ಹೊರತಾಗಿ ಸುಮ್ಮನೆ ನಿಂತರೂ ಸಾಕು ಅದೇ ರೆಸ್ಟ್ ಹೊರತು ನಿದ್ರೆ ಅವಶ್ಯಕತೆಯು ಇರುವುದಿಲ್ಲ ಎಂದು ಅರಿವಾಗಿಸಲು ಅಷ್ಟೇ.

ಕಠಿಣ ಪರಿಸ್ಥಿತಿಯಲ್ಲಿ ಹಗಲೂ ರಾತ್ರಿ ಹೋರಾಡಬೇಕಾದ ಅಥವಾ ಪ್ರಕೃತಿ ವಿಕೋಪಗಳಂತಹಾ ಸಂದರ್ಭದಲ್ಲಿ ಊಟ,ನೀರು,ನಿದ್ರೆ ಬಿಟ್ಟು ಜನರ ರಕ್ಷಣೆಯಲ್ಲಿ ತೊಡಗುವ ರಕ್ಷಕರು ಇವರೇ ಆಗಿರುತ್ತಾರೆ !

ಇವರು ನಿಮ್ಮನ್ನು ಹೆಗಲ ಮೇಲೆ ಹಾಕಿಕೊಂಡು ಎಲ್ಲಿಯೂ ನಿಮ್ಮನ್ನು ಕೆಳಗಿಳಿಸದೆ ಸತತವಾಗಿ 120 ಕಿಲೋಮೀಟರಿನಷ್ಟು ದೂರ ಕ್ರಮಿಸಬಲ್ಲರು !

ಹೋಹೋ ಹಾಗಾದರೆ ಇವರೆಲ್ಲರೂ ಬಲಿಷ್ಟ ಬಾಡಿ ಬ್ಯುಲ್ಡ್ ಮಾಡಿರುತ್ತಾರಲ್ಲವೇ ಎಂದು ತಿಳಿದರೆ ತಪ್ಪಾಗುತ್ತದೆ ಏಕೆಂದರೆ ಅತ್ಯುತ್ತಮ ಬಾಡಿ ಬ್ಯುಲ್ಡಿಂಗ್ ಎಂದರೆ ಸುಲಲಿತವಾಗಿ ಏನನ್ನೂ ಮಾಡಲಾಗದ ದೇಹ ಎಂದು ಅರ್ಥ ಬೇರೆಲ್ಲಾ ಸುಸಲಿತ ಕೆಲಸಗಳು ಬದಿಗಿರಲಿ ಅತ್ಯುತ್ತಮ ಬಾಡಿಬ್ಯುಲ್ಡರಿಗೆ ಬೆನ್ನಿನ ಕಡೆ ಹಿಮ್ಮಡಚಿ ಕೈ ಮುಗಿಯಲೂ ಕೂಡ ಸಾದ್ಯವಾಗದು ಎಂಬುದು ನೆನಪಿರಲಿ..!
ಹಾಗಾಗಿ ಬಾಡಿಬ್ಯುಲ್ಡರ್ ಯಾವತ್ತೂ ಅತ್ಯುತ್ತಮ ಹೋರಾಟಗಾರ ಅಥವಾ ಫೈಟರ್ ಆಗಲಾರನು !

ಹಾಗಾಗಿ ಬಾಡಿಬ್ಯುಲ್ಡರ್ ಯಾವತ್ತೂ ಮಿಲಿಟರಿಯ ಮಟ್ಟಿಗೆ ಅನಗತ್ಯ ವಸ್ತು !

ಮೇಲಿನವೆಲ್ಲವನ್ನೂ ತವಾಂಗ್ ನಲ್ಲಿ ಇರುವ ಪರ್ವತ್ ಘಾತಕ್ ಸ್ಕೂಲ್ ನಲ್ಲಿ ತರಬೇತಿ ನೀಡಲಾಗುತ್ತದೆ.

ಈ ಮಾರ್ಕೋಸ್ ಕಮಾಂಡೋಗಳ ಕಥೆ ಇಷ್ಟೇ ಅಲ್ಲ ಇವರು ಸಮುದ್ರದ ಒಳಗೆ ಕೂಡ ಹೊರಾಟ ನಡೆಸಲು ಸಮರ್ಥವಾಗಿ ಸ್ಕ್ಯೂಬಾ ಡೈವಿಂಗ್ ಟ್ರೈನಿಂಗ್ ಕೊಡಲಾಗುತ್ತದೆ.

ಇವರಿಗೆ ಕೈ ಕಾಲು ಕಟ್ಟಿ ಹಾಕಿದರೂ ಕೂಡ ನಿರಂತರವಾಗಿ ನೀರಿನಲ್ಲಿ ತೇಲುವ ,ಈಜಾಡುವ ಕಲೆಯನ್ನೂ ಕೂಡ ಕಲಿಸಿರಲಾಗುತ್ತದೆ ಹಾಗೂ ಇವರು ವಾರಗಟ್ಟಲೆ ನೀರಿನಲ್ಲಿ ಈಜಾಡುತ್ತಲೇ ಇರುವಷ್ಟು ದೈಹಿಕ ಸಾಮರ್ಥ್ಯ ಹೊಂದುವಷ್ಟರ ಮಟ್ಟಿಗೆ ತರಬೇತಿ ಪಡೆದಿರುತ್ತಾರೆ !

ಮುಖ್ಯವಾಗಿ ಒಬ್ಬ ವ್ಯಕ್ತಿಯನ್ನು ಹೊತ್ತುಕೊಂಡು ಸರಾಗವಾಗಿ ಈಜಾಡಬಲ್ಲರು !

ಆಕಾಶದಲ್ಲಿ ಬೀಳುತ್ತಲೇ ಹೋರಾಡುವ ಸಿನಿಮಾ ನೋಡಿರುತ್ತೀರಲ್ಲವೇ ಹಾಗೆ ಇವರು ಆಕಾಶದಲ್ಲಿ ಗಾಳಿಯಲ್ಲಿ ತೇಲುತ್ತಲೇ ಸಮರ್ಥವಾಗಿ ಕ್ಷಣಮಾತ್ರದಲ್ಲಿ ಯೋಚಿಸಬಲ್ಲವರಾಗಿರುತ್ತಾರೆ ಹಾಗೂ ಕ್ಷಣಮಾತ್ರದಲ್ಲಿ ಆಕಾಶದಲ್ಲಿಯೇ ಬತ್ತಳಿಕೆಯಲ್ಲಿನ ಯಾವುದೇ ಗನ್ ಸುಗಮವಾಗಿ ಬಳಸಬಲ್ಲರು ಅದಲ್ಲದೆ ಮೇಲಿನಿಂದ ಕೆಳಗೆ ಹಾರಿದ ನಂತರದ ಕೊನೆಯ ನೆಲ ತಲುಪಲು ಕೇವಲ 7 ಸೆಕೆಂಡುಗಳಲ್ಲಿ ಇದ್ದಾಗ ಮಾತ್ರ ಪುಟಾಣಿ ಪ್ಯಾರಚೂಟ್ ಓಪನ್ ಮಾಡಿ ಇಳಿಯುವಲ್ಲಿ ಇವರು ಸರ್ವ ಸಮರ್ಥರು .

ಅಂದರೆ ಬೇರೆಲ್ಲಾ ಪಾರಾಚ್ಯೂಟ್ ಗಳು ಮೇಲೆಲ್ಲಿಯೋ ಪ್ಯಾರಾಚೂಟ್ ಬಿಚ್ಚಿ ಹಾರಾಡುತ್ತಾರಲ್ಲ ಅದಲ್ಲ ಆ ರೀತಿಯಾದರೆ ಊರಿಗೆಲ್ಲಾ ಕಂಡುಬಿಡುತ್ತದೆ ಈ ಕಮಾಂಡೋಗಳು ಬೆಂಗಳೂರಿನಲ್ಲಿ ಇಳಿದರೆಂದರೆ ಅಲ್ಲಿನ ನಾಲ್ಕಾರು ಫ್ಲೋರಿನ ಬಿಲ್ಡಿಂಗ್ ಟಾಪ್ ನ ಲೆವೆಲ್ಲಿನಲ್ಲಿ ಪುಟಾಣಿ ಪ್ಯಾರಾಚೂಟ್ ಓಪನ್ ಮಾಡುತ್ತಾರೆ ಹಾಗಾಗಿ ದೂರದಿಂದ ಯಾರಿಗೂ ಪಾರಾಚೂಟ್ ಕಾಣದು ಇದೆಂತಹಾ ಅಪಾಯಕಾರಿ ಎಂದರೆ ಪ್ಯಾರಾಚೂಟ್ ಓಪನ್ ಮಾಡುವಲ್ಲಿನ ಕ್ಷಣಗಳ ಏರುಪೇರು ನೇರವಾಗಿ ಸಾವನ್ನೇ ತಂದುಬಿಡುತ್ತದೆ !

ಇವೆಲ್ಲಾ ಆಕಾಶದ ಹಾರಾಟದ (HALO) High Altitude Low Opening ಮತ್ತು (HAHO)High Altitude High Openingನ ಎಲ್ಲ ವಿಭಾಗದಲ್ಲಿಯೂ ಕೂಡ ಈ ಕಮಾಂಡೋ ಪಡೆ ಸರ್ವ ಸಮರ್ಥವಾಗಿರುತ್ತದೆ. ಈ ಹಾರಾಟಗಳೆಲ್ಲವನ್ನೂ ಆಗ್ರಾ ಮತ್ತು ಕೊಚ್ಚಿಯಲ್ಲಿ ಇರುವ ನೇವಿ ಸ್ಕೂಲಿನಲ್ಲಿ ಕಲಿಸಲಾಗುತ್ತದೆ.

ಇದಾದ ನಂತರ ಈ ಕಮಾಂಡೋಗಳಿಗೆ ಪ್ರಪಂಚದ ಎಲ್ಲಾ ಅಪಾಯಕಾರಿ ಅತ್ಯಾಧುನಿಕ ಆಯುಧಗಳ ಉಪಯೋಗ ಮತ್ತು ಬಳಕೆಯನ್ನು ಕಲಿಸಿಕೊಡಲಾಗುತ್ತದೆ ಹಾಗಾಗಿ ಇವರು ಬಳಸದ ಆಯುಧ ಪ್ರಪಂಚದ ಮೇಲೆ ಇರಲಿಕ್ಕೇ ಸಾಧ್ಯವಿಲ್ಲ ಎಂಬಂತಹಾ ಆಯುಧ ನಿಷ್ಣಾತರು ಇವರಾಗಿರುತ್ತಾರೆ.

ಇವೆಲ್ಲವನ್ನೂ ಇವರಿಗೆ ಮಿಜೋರಂನಲ್ಲಿ ಇರುವ ಕೌಂಟರ್ ಇನ್ಸಜೆನ್ಸಿ ಮತ್ತು ವಾರ್ಫೇರ್ ಸ್ಕೂಲ್ ನಲ್ಲಿ ಕಲಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಂಪೂರ್ಣವಾಗಿ ಬುಲೆಟ್ ಪ್ರೂಫ್ ತೊಟ್ಟಿದ್ದರೂ ಕೂಡ ಬುಲೆಟ್ ಬಂದು ದೇಹಕ್ಕೆ ಬಡಿದರೆ ಅದಾವ ತರಹದ ನೋವು ಆಗುತ್ತದೆ ಎಂಬುದನ್ನು ನಿಜವಾದ ಬುಲೆಟ್ ಬಳಸಿ ಕಲಿಸಲಾಗುತ್ತದೆ ಇಂತಹಾ ಸಂದರ್ಭದಲ್ಲಿ ಇವರು ಬಳಸುವ ಇಸ್ರೇಲಿನ ತಾವೋರ್ ಗನ್ನಿನ ಬುಲೆಟ್ ಏನಾದರೂ ಬಂದು ಪಕ್ಕೆಗೆ ಬಡಿದರೆ ಬುಲೆಟ್ ಪ್ರೂಫ್ ಡ್ರೆಸ್ ಇದ್ದರೂ ಕೂಡ ಪಕ್ಕೆಯ ಮೂಳೆ ಲಟಕ್ಕೆಂದು ಮುರಿದುಬಿಡುತ್ತದೆ.!!

ಇವರ ಬಳಿಯಲ್ಲಿ ಹೆಚ್&ಕೆ ಎಮ್,ಪಿ-5 ಸಬ್ ಮಷೀನ್ ಗನ್,ಎಸ್,ಐ,ಜಿ-ಪಿ-226& ಗ್ಲಾಕ್-17 ಗನ್ಗಳು ದೇಹಕ್ಕೆ ಸಮೀಪದಲ್ಲಿನ ಆಪರೇಸನ್ನಿಗಾಗಿ ಇರುತ್ತವೆ.

ದ್ರನೋವ್ ಮತ್ತು ಗಾಲಿಲ್ ಸ್ನೈಪರ್ ರೈಫಲ್ ಗಳನ್ನು ಬಹುದೂರದ ಕಡೆ ಗುರಿಯಿಡಲು ಬಳಸುತ್ತಾರೆ. ಇಟಾಲಿಯನ್ , ಎಕ್ಸ್ -ಎಕ್ಸ್100 ಮತ್ತು ಇಸ್ರೇಲೀ ನಿರ್ಮುತ ಎಕ್ಸ್ 95 ವಾಟರ್ ಪ್ರೂಫ್ ಗನ್ ಗಳನ್ನು ನೀರಿನ ಆಳದಲ್ಲಿ ಬಳಸುತ್ತಾರೆ.
ಇದಲ್ಲದೆ ಗ್ರನೈಡ್ ಎಸೆಯುವ ಗನ್ ಕೂಡ ಇವರಲ್ಲಿ ಇರುತ್ತದೆ .

ಇನ್ನೂ ಹೇಳಿದರೆ ಹಲವಾರಿವೆ ಬಿಡಿ ಆದರೆ ಪ್ರಪಂಚದ ಯಾವೊಬ್ಬ ಸಾಮಾನ್ಯ ವ್ಯಕ್ತಿಯೂ ಕೂಡ ನೆಲದ ಮೇಲಾಗಲಿ, ನೀರಿನಲ್ಲಿ ತೂರಿಕೊಂಡಾಗಲಿ, ಆಕಾಶದಲ್ಲಿ ಹಾರಾಡುತ್ತಲೇ ಆಗಲಿ ಈ ಮಾರ್ಕೋಸ್ ಕಮಾಂಡೋಗಳಿಗೆ ಸರಿಸಮನಾಗಿ ಹೋರಾಟ ಮಾಡಲು ಸಾಧ್ಯವೇ ಇಲ್ಲ.!

ಬರಿಗೈನಲ್ಲಿ ಬಂದ ಯಾವುದೇ ಉಗ್ರಗಾಮಿಗಳು ಇವರ ಜೊತೆ ಹೊಡೆದಾಡಿ ಬದುಕುಳಿಯಲಾರರು ಅಸಲಿಗೆ ಇಂತಹವರ ಜೊತೆ ಉಗ್ರರು ಹೋರಾಡುವುದಿರಲಿ ಸುಮ್ಮನೆ ಇವರ ಸರಿಸಮನಾಗಿ ನೂರು ಕಿಲೋಮೀಟರು ಓಡಿಬಿಟ್ಟರೂ ಸಾಕು ದಾರಿಮದ್ಯದಲ್ಲೇ ಉಸಿರುಗಟ್ಟಿ ಮಕಾಡೆ ಬಿದ್ದು ಮಿಲಿಮಿಲಿ ಉರುಳಾಡಿ ರಕ್ತಕಾರಿಕೊಂಡು ಪರಂಧಾಮದ ಪಾಲಾಗಿಬಿಡುತ್ತಾನೆ.!!

ಪ್ರಪಂಚದ ಅತ್ಯುತ್ತಮ ಕಮಾಂಡೋ ಟೀಮ್ ಗಳಲ್ಲಿ ಇವರ ಹೆಸರೂ ಕೂಡ ಇದೆ.!

ಈಗ ಹೇಳಿ ದೇಶ ರಕ್ಷಣೆ ಆಗುತ್ತಿರುವುದು ಯಾವುದೋ ರಾಜಕಾರಣಿಗಳಿಂದಲಾ ಅಥವಾ ಪ್ರಾಣವನ್ನೇ ಒತ್ತೆ ಇಟ್ಟು ಹೋರಾಡುತ್ತಿರುವ ಇಂತಹಾ ಕಮಾಂಡೋಗಳಿಂದಲಾ..?

ಬರಹ – Umeshchar Kb