ಕನ್ನಡ ಚಿತ್ರರಂಗದ ಹಿರಿಯ ನಟ ಕಾಶಿನಾಥ ಇನ್ನಿಲ್ಲ..!!

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕರಾದ ಕಾಶಿನಾಥ್ ಇನ್ನಿಲ್ಲ..!! ಹೌದು..!! ಬೆಂಗಳೂರಿನಲ್ಲಿರುವ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾಶಿನಾಥ್ ನಿಧನರಾಗಿದ್ದಾರೆ. ಕಳೆದ ಎರಡು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆ ಉಸಿರೆಳೇದಿದ್ದಾರೆ. ನಮ್ಮನ್ನಗಳಿದ ಕಾಶಿನಾಥ ಅವರು ಪತ್ನಿ, ಇಬ್ಬರು ಗಂಡು ಮಕ್ಕಳನ್ನ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಸುಮಾರು 43 ಚಿತ್ರಗಳಲ್ಲಿ ಕಾಶಿನಾಥ್ ಅವರು ನಟಿಸಿದ್ದರು. ಅಮರ ಮಧುರು ಪ್ರೇಮ, ಅನುಭವ, ಅನಾಮಿಕ, ಅಜಗಜಾಂತರ, ಶ್, ಅನಂತನ ಅವಾಂತರ, ಅವನೇ ನನ್ನ ಗಂಡ ಮುಂತಾದ ಹಲವಾರು ಚಿತ್ರಗಳಲ್ಲಿ ಕಾಶಿನಾಥ್ ಅವರು ನಟನೆ ಮಾಡಿದ್ದರು. ಕನ್ನಡ ಚಿತ್ರರಂಗಕ್ಕೆ ಉಪೇಂದ್ರರಂತಹ ಅದ್ಭುತ ಕಲಾವಿದರನ್ನ ಪರಿಚಯಿಸಿದ ಹೆಗ್ಗಳಿಕೆ ಕಾಶಿನಾಥ್ ಅವರದ್ದು.

ಹನ್ನೊಂದು ಕನ್ನಡ, ಒಂದು ಹಿಂದಿ ಹಾಗೂ ಒಂದು ತೆಲುಗು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಎಂಬತ್ತರ ದಶಕದ ಸ್ಯಾಂಡಲ್‍ವುಡ್‍ನ ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿ ಕಾಶಿನಾಥ ಅವರು ಹೆಸರು ಮಾಡಿದ್ದರು. ಇತ್ತೀಚಿಗೆ ಬಿಡುಗಡೆಯಾದ ಚೌಕ ಚಿತ್ರದಲ್ಲಿ ನಟಿಸಿ ಕಾಶಿನಾಥ ಅವರು ಅಭಿಮಾನಿಗಳನ್ನು ರಂಜಿಸಿದ್ದರು, ಇದೇ ಅವರ ಕೊನೆಯ ಚಿತ್ರ ಆಗಿದೆ.

ಅನುಭವ ಎನ್ನುವ ಚಿತ್ರದ ಮೂಲಕ ಪೋಲಿ ಹುಡುಗರ ಮನ ಗೆದ್ದಿದ ಕಾಶಿನಾಥ ಅವರು ನಮ್ಮನ್ನಗಲಿರುವು ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿದೆ. ಆ ಭಗವಂತ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಳಿಕೊಳ್ಳೋಣ.