ಮತ್ತ ಕದನ ವಿರಾಮ ಉಲ್ಲಂಘನೆ..!! ಬರೋಬ್ಬರಿ ಉತ್ತರ ಕೊಟ್ಟ ಭಾರತ..

ಜಮ್ಮು : ಜಮ್ಮು ಮತ್ತ ಸಾಂಬಾ ಜಿಲ್ಲೆಗಳ ಅಂತರರಾಷ್ಟ್ರೀಯ ಗಡಿ ಒಳಗ ಪಾಕಿಸ್ತಾನ ಎರಡನೇ ದಿನಾನೂ ದಾಳಿ ಮುಂದುವರಿಸೇತಿ. ಮಂದಿ ಮಕ್ಕಳು ಇರು ಜಾಗದ ಮ್ಯಾಲ ಮತ್ತ ಗಡಿ ಠಾಣೆಗಳ ಮ್ಯಾಲ ಹಾಕಿದ ಭಾರಿ ಪ್ರಮಾಣದ ಷೆಲ್‌ ದಾಳಿಯಲ್ಲಿ ಒಬ್ಬ ನಮ್ಮ ಸೈನಿಕ ಮತ್ತ ಮೂರು ಮಂದಿ ಸತ್ತಾರ..!

ಮತ್ತ ಮೂರು ಮಂದಿಗೆ ಗಾಯಗೊಳ ಆಗ್ಯಾವ ಇದಕ್ಕ ನಮ್ಮ ಸೈನಿಕರು ಬರೋಬ್ಬರ ಉತ್ತರಾನ ಕೊಟ್ಟಾರ ಮತ್ತ.

ಅವನೌನ ಆ ಮಕ್ಕಳ ಮಾಡಿದ್ದ ದಾಳಿ ಒಳಗ ಗಾಯಗೊಂಡಿದ್ದ ಗಡಿ ಭದ್ರತಾ ಪಡೆಯ ಯೋಧ ಜಗ್‌ಪಾಲ್‌ ಸಿಂಗ್‌ ಅಣ್ಣಾರ ಹುತಾತ್ಮರಾದರು. ಗಡಿ ಒಳಗ ಪರಿಸ್ಥಿತಿ ಬಾಳ ಕೆಟ್ಟ ಆಗೆತಿ.

ಹಿಂಗಾಗಿ ಗಡಿ ಹತ್ತರಕ್ಕ 5 ಕಿ.ಮೀ ವ್ಯಾಪ್ತಿ ಒಳಗ ಇರು ಎಲ್ಲಾ ಸಾಲಿಗಳಿಗೆ ಸೂಟಿ ಕೊಟ್ಟಾರ ಅಂತ ಮೂಲಗಳಿಂದ ತಿಳಿದ ಬಂದೆತಿ.

ತಕ್ಕ ಉತ್ತರ: ‘ಗಡಿ ಒಳಗ ಮತ್ತ ಮತ್ತ ದಾಳಿ ಮಾಡಾಕತ್ತಿರು ಪಾಕಿಸ್ತಾನಕ್ಕ ಬರೋಬ್ಬರಿ ಉತ್ತರ ಕೊಡಾಕ ಭಾರತದ ಪಡೆಗಳು ಸರ್ವಸನ್ನದ್ಧ ಆಗೆತಿ.
ಏನ ಮಾಡಬೇಕ ಅಂತ ಭಾರತದ ಯೋಧರಿಗೆ ತಿಳಿದೈತಿ’ ಅಂತ ಕೇಂದ್ರ ಸಚಿವ ಸುಭಾಷ್‌ ಭಾರ್ಮೆ ಹೇಳ್ಯಾರ.

ಭಾರತದ ವಿರೋಧ: (ನವದೆಹಲಿ ವರದಿ): ಹಗಲೆ ಮುಗಲೇ ಕದನ ವಿರಾಮ ಉಲ್ಲಂಘನೆ ಮತ್ತ ಊರಾಗಿನ ಮಂದಿ ಗುರಿಮಾಡಿ ಮಾಡು ಪಾಕ್‌ ದಾಳಿಯನ್ನ ಖಂಡಿಸಿರುವ ಭಾರತ, ಪಾಕಿಸ್ತಾನದ ಉಪ ಹೈ ಕಮಿಷನರ್‌ ಸೈಯದ್‌ ಐದರ್‌ ಷಾ ಅವರನ್ನು ಕರೆಸಿಕೊಂಡು ಭಾರಿ ವಿರೋಧ ಮಾಡೈತಿ..