ವಿಶ್ವಗುರು ಭಾರತ ಅದು ನಮ್ಮ ಕಲ್ಪನೆಯ ವಿಜಯದ ಭಾರತ!

ಡಾ.ಎ.ಪಿ.ಜೆ. ಅಬ್ದುಲ್ ಕಲಾಂರು ಕಂಡ 2020ರ ಕನಸು, ಕವಿಗಳ ಕಲ್ಪನೆಗಿಂತಲೂ ಮೀರಿ ರಾಷ್ಟ್ರ ಪ್ರೇಮಿಗಳ ಮನದಾಳದಲ್ಲಿ ಬೇರೂರಿ ನಿಂತಿರುವುದನ್ನು ಕಾಣಬಹುದಾಗಿದೆ. ‘ಭಾರತ’ ಎಂದಾಕ್ಷಣ ಜಗತ್ತಿನ ಏಕೈಕ ವಿಭಿನ್ನ ಹಾಗೂ ವಿಶಿಷ್ಟ ಸಂಸ್ಕøತಿ ಹೊಂದಿರುವ ರಾಷ್ಟ್ರ ಎಂಬ ಕಲ್ಪನೆ ಇಡೀ ಜಗತ್ತಿಗೆ ಇದೆ. ನಮ್ಮ ದೇಶವು ನಾಗರೀಕತೆಯ ಅಸ್ಥಿತ್ವಕ್ಕೆ ಬಂದಾಗಿನಿಂದಲೂ ಇಂದಿನವರೆವಿಗೂ ನಮ್ಮ ದೇಶದ ಜನತೆಯು ‘ಮಾದರಿ ರಾಷ್ಟ್ರ’ವಾಗಿ ನಿಲ್ಲುವ ನವ ಭಾರತವನ್ನು ಎದುರು ನೋಡುತ್ತಿದ್ದಾರೆ ಎಂಬುದು ಗೋಚರವಾಗುತ್ತಿದೆ. ಇನ್ನು ನಮ್ಮ ದೇಶದ ಕೆಲವು ಜನರಿಗೆ ಸ್ವಾಮಿ ವಿವೇಕಾನಂದರ ವಿಚಾರದ ಕೊರತೆಯುಳ್ಳ ವ್ಯಕ್ತಿಗಳಿಗೆ ಮಾತೃಭೂಮಿಯ ದಿವ್ಯತೆಯನ್ನು ಅರಿಯದವರಿಗೆ ತಿಳಿಸಬೇಕಾದ ವಿಚಾರಗಳು ಸಾಕಷ್ಟಿವೆ ಎಂಬ ಅಭಿಪ್ರಾಯವು ಆಂದೋಲನದ ರೂಪದಲ್ಲಿ ನಿಂತುಕೊಳ್ಳುತ್ತಿವೆ.

ನಮ್ಮ ದೇಶದ ಜನತೆಯಲ್ಲಿ ಅಘಾಡವಾಗಿ ನೆಲೆನಿಲ್ಲಬೇಕಾದ ವಿಚಾರಗಳು ಯಾವಾಗಲೂ ಸಡಿಲಗುಳ್ಳುತ್ತಿವೆ, ಜಗತ್ತಿನ ಸಕಲ ರಾಷ್ಟ್ರಗಳಿಗೆ ಸಂಸ್ಕøತಿ.ಆಚಾರ,ವಿಚಾರಗಳನ್ನು ಪರಿಚಯ ಮಾಡಿಕೊಟ್ಟ ರಾಷ್ಟ್ರ ನಮ್ಮದು ಒಂದು ಕಾಲದಲ್ಲಿ ಎಲ್ಲಾ ಶಕ್ತಿ ನಮ್ಮಲ್ಲಿದ್ದರೂ ಎಲ್ಲರೆದುರು ಅಂಗಲಾಚುವ ಪರಿಸ್ಥಿತಿ ಎದುರಾಗಿದ್ದುದನ್ನು ಕಾಣಬಹುದು ಆ ಗಳಿಗೆಗಳು ನಮ್ಮೆಲ್ಲರ ಪಾಲಿನ ದೌರ್ಭಾಗ್ಯದ ದಿನಗಳು.

ಯುವ ಜನತೆಯೇ ಅಘಾದವಾಗಿರುವ ನಮ್ಮ ದೇಶದಲ್ಲಿ ಸಕಲ ವಿದ್ಯೆ, ಬುದ್ಧಿವಂತಿಕೆಯುಳ್ಳ ಪ್ರತಿಭೆಗಳಿದ್ದರೂ ಇದುವರೆವಿಗೂ ಯಾವುದೇ ಉದ್ಯೋಗಾವಕಾಶಗಳು ದೊರಕುತ್ತಿರಲಿಲ್ಲ ಅದು ನಮ್ಮನ್ನಾಳುತ್ತಿದ್ದ ರಾಜಕಾರಣಿಗಳು, ಮತ್ತು ಸರ್ಕಾರದ ಕೃಪಾಕಟಾಕ್ಷವಾಗಿತ್ತು ಅದುವೇ ದೇಶದ ದೌರ್ಭಾಗ್ಯವಾಗಿತ್ತು. ಅತೀ ಹೆಚ್ಚು ಅಂಕಗಳನ್ನು ಘಳಿಸಿ ಬರುವ ವಿದ್ಯಾವಂತರಿಗಿಂತಲೂ ಅತಿ ಹೆಚ್ಚು ಲಂಚ ಕೊಟ್ಟು ಬರುವ ಸಿರಿವಂತರೇ ನೌಕರಿಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ತಪ್ಪು ನಮ್ಮ ಸಮಾಜದ್ದು ಬ್ರಷ್ಟಾಚಾರಕ್ಕೆ ಪೂರಕವಾಗಿಯೇ ಈ ಸಮಾಜ ನಿಂತಿರುವುದನ್ನು ಕಾಣಬಹುದಾಗಿದೆ.

ಈ ಬ್ರಷ್ಟಾಚಾರ ಎಂಬುದು ಬಹಳ ದೊಡ್ಡ ಪೆಡಂಭೂತವಾಗಿದ್ದು ನಮ್ಮ ನಾಗರಿಕರು,ರೈತರು ಸಂದಿಗ್ನ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಸರ್ಕಾರಿ ನೌಕರರಲ್ಲಿ ಜಡತ್ವವು ಆವರಿಸಿದ್ದು ಲಂಚವಿಲ್ಲದೇ ಕೆಲಸಗಳೇ ಆಗದಂತಹ ಪರಿಸ್ಥಿತಿಯನ್ನು ಕಾಣಬಹುದಾಗಿದೆ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಾದಲ್ಲಿ ಮಾತ್ರ ಭಾಗ್ಯಶಾಲಿ,ಸಧೃಡಶಾಲೀ ಭಾರತದ ನಿರ್ಮಾಣ ಸಾದ್ಯ ಎಂಬುದು ನನ್ನಂತ ಬಹುಪಾಲು ಯುವಜನತೆಯ ಆಶೋತ್ತರ ಎನ್ನಬಹುದಾಗಿದು.
ನಾವೆಲ್ಲರೂ ಕಲ್ಪಿಸಿಕೊಳ್ಳಲಾಗದ ಸತ್ಯವೊಂದಿದೆ ಇಡೀ ಜಗತ್ತಿನಲ್ಲಿ ಭಾರತವನ್ನು ಹೊರತುಪಡಿಸಿ ಯಾವ ದೇಶವೂ ಸಹ ಅಷ್ಟಾಗಿ ಪ್ರಭಾವಕಾರಿಯಾಗಿ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮವನ್ನು ಜಾರಿಗೆತಂದಿಲ್ಲ ಅವರಿಗೆ ಬುದ್ದಿವಂತರ ಕೊರತೆ ನಿವಾರಿಸಿಕೊಳ್ಳುವ ಸಲುವಾಗಿಯೆ ಯೋಚಿಸುತ್ತಾರೆ.

ಆದರೆ ನಮ್ಮನ್ನು ಇದುವರೆಗೂ ಕಾಣದ ರಾಷ್ಟ್ರಗಳೇ ದಬ್ಬಾಳಿಕೆ ನಡೆಸಿದ್ದವು ಏಕೆಂದರೆ “ ಈ ಪುಣ್ಯಭೂಮಿಯಲ್ಲಿ ಹುಟ್ಟುವ ಪ್ರತಿಯೊಬ್ಬ ವ್ಯಕ್ತಿಯು ಸಹ ಒಂದೊಂದು ಶಕ್ತಿಯಾಗಬಲ್ಲ ಸಾಮಥ್ಯವಿದೆ”. ಇದು ನಮ್ಮ ದೇಶದ ದೌರ್ಭಾಗ್ಯವೇ ಆಗಿದೆ. ಆದರಂತು ಇಡೀ ಜಗತ್ತು ಭಾರತ ಕೊಡುವ ಅವಕಾಶಗಳಿಗೆ ಕಾದುಕುಳಿತಿದ್ದಂತು ಸತ್ಯ. ಆ ಸುವರ್ಣಯುಗ ಇಂದು ಆರಂಭವಾಗಿದೆ ಉಳ್ಳವರು ದೋಚಿ ಕೂಡಿಟ್ಟಿದ್ದ ಕಪ್ಪು ಖಾಸುಗಳು ಹೊರಬರುತ್ತಿವೆ ಬಡ ರೈತರು, ಸಾಮಾನ್ಯ ಜನತೆಗೆ 2016 ಸುವರ್ಣ ಯುಗ ಎಂದರೆ ತಪ್ಪಾಗಲಾರದು ಕಾರಣ ನಮ್ಮ ದೇಶದ ಹೆಮ್ಮೆಯ ಪ್ರಧಾನಿಗಳು ತೆಗೆದುಕೊಂಡ ನಿರ್ಧಾರದ ಪ್ರತಿಫಲವಾಗಿದೆ. ಕಠಿಣ ಪರಿಶ್ರಮ ವಹಿಸಿ ಕಪ್ಪುಹಣಗಳು, ಕೋಟಾ ನೋಟುಗಳನ್ನು ಬೆಂಕಿಗೆ ಆಹುತಿಯಾಗುವಂತೆ ಮಾಡಿರುವ ಪ್ರಧಾನಿಗೆ ಈ ದೇಶದ ಪ್ರತಿಯೊಬ್ಬ ವಿದ್ಯಾವಂತರು ‘ಸೆಲ್ಯೂಟ್’ ಮಾಡುವಂತಹ ಸಂತಸದ ವಿಷಯವಾಗಿದೆ.
ಹದಿನಾರನೆ ಶತಮಾನದ ವಿಶ್ವ ವಿಖ್ಯಾತ ಭವಿಷ್ಯಕಾರ ಫ್ರೆಂಚ್ ಪ್ರವಾದಿ ನ್ಯಾಸ್ಟ್ರ ಡ್ಯಾಮಸ್ 1555 ರಲ್ಲಿ ಬರೆದಿದ್ದ ಭವಿಷ್ಯ ಬರೆದಿದ್ದರೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಕಾಣಬರುದು ಆ ಭವಿಷ್ಯದಲ್ಲಿ “2014 ರಿಂದ 2026ರ ಅವಧಿಯಲ್ಲಿ ಭಾರತಕ್ಕೆ ಇಬ್ಬ ಮೇಧಾವಿ ಪುರುಷನ ನಾಯಕತ್ವ ಸಿಗಲಿದೆ, ಆರಂಭದಲ್ಲಿ ಜನರು ಆತನ್ನು ದ್ವೇಶಿಸುತ್ತಾರೆ, ಆರದರೆ ಕ್ರಮೇಣ ಆತನನ್ನು ಪ್ರೀತಿಸುತ್ತಾರೆ, “ಆತ ದೇಶದ ದೆಸೆಯನ್ನೇ ಬದಲಿಸುತ್ತಾನೆ” ಎಂದು 450 ವರ್ಷಗಳ ಹಿಂದೆಯೇ ಭವಿಷ್ಯ ಬರೆದಿದ್ದ ಫ್ರೆಂಚ್ ಪ್ರವಾದಿ ನ್ಯಾಸ್ಟ್ರಡ್ಯಾಮಸ್ ಹೇಳಿರುವುದು ಸತ್ಯದ ಸಂಘತಿ ಎಂಬುದು ಇಂದು ಅರ್ಥವಾಗುತ್ತಿದೆ.

ದೇಶದ ಭದ್ರÀತೆಗೆ ಸರ್ಜಿಕಲ್ ಸ್ಟ್ರೈಕ್ ಆಗಿದೆ, ಇನ್ನು ಕಪ್ಪು ಹಣ ಮತ್ತು ಬ್ರಷ್ಟರ ವಿರುದ್ಧವೂ ಆಗಿದೆ ಆದರೆ ಇನ್ನೊಂದು ಮಹತ್ತರ ಕೆಲಸವೂ ಬೇಗ ನೆರವೇರಬೇಕೆಂಬುದು ಬಹಳ ಮುಖ್ಯ ವಿಷಯವಾಗಿದೆ ಆರಂಭದಲ್ಲಿ ಭಾರತವನ್ನು ವಿಶ್ವದ ನಂ.1 “ ಯುವರಾಷ್ಟ್ರ ” ಎಂದು ಕರೆಯಲಾಗುತ್ತಿತ್ತು, ಆದರೆ ಇಲ್ಲಿಯ ಶಿಕ್ಷಣ ವ್ಯವಸ್ಥೆಯಲ್ಲಿ ಕೊಂಚವು ಬದಲಾವಣಿಯಾಗುತ್ತಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣಿ ಎಂದರೆ ಹೊಸ-ಹೊಸ ಆವಿಶ್ಕಾರಗಳ ಜೊತೆಗೆ ಸಚ್ಚಾರಿತ್ರ್ಯವುಳ್ಳ ವೀರಸನ್ಯಾಸಿ “ ಸ್ವಾಮಿ ವಿವೇಕಾನಂದರ ಸಾಹಿತ್ಯವನ್ನು ಅಳವಡಿಸಬೇಕಿದೆ.

ಇಂದು ಯುವಕರ ಕಾರ್ಯಚಟುವಟಿಕೆಗಳನ್ನು ಗಮನಿಸಿದರೆ 2020ರ ಕನಸು ಬಹಳಬೇಗ ನನಸಾಗುವಂತೆ ಗೋಚರವಾಗುತ್ತಿದೆ. ಇಂದು ಶಿಕ್ಷಣ ಸಂಸ್ಥೆಗಳು ಉಳ್ಳವರ ಪಾಲಾಗಿವೆ ಮತ್ತು ಸಿರಿವಂತರ ಹಿಡಿತದಲ್ಲಿವೆ ಅಲ್ಲಿಯೇ ಕಪ್ಪುಹಣ ಇದೆ ಎಂದು ಎಲ್ಲರಿಗೂ ಗೊತ್ತು ಅದು ಬಹಳ ಬೇಗ ಆಗಬೇಕು ಎನ್ನುವುದು ನನ್ನ ಅಭಿಪ್ರಾಯ ಆದ್ದರಿಂದಲೇ ನವೆಲ್ಲರು ದೇಶದ ಹಿತದೃಷ್ಟಿಯಿಂದ ಒಕ್ಕೋರಳಿನಿಂದ ಸಾಗಿದಲ್ಲಿ ಅಬ್ದುಲ್ ಕಲಾಂರು ಕಂಡ ಕನಸು ಸನಿವಾಗಲು ಸಕಾಲವಾಗಿದ್ದು ಯುವ ಜನತೆಯು ರಾಷ್ಟ್ರ ಭಕ್ತಿಯ ಕಿಚ್ಚನ್ನು ತುಂಬಿಕೊಂಡು ಸ್ವಾರ್ಥತೆಯನ್ನು ಬಿಟ್ಟು ಒಕ್ಕೊರಳಿನಿಂದ ಹೊರಟರೆ ಇಡೀ ವಿಶ್ವವೇ ನಾವು ಕೊಡುವ ಅವಕಾಶಗಳಿಗೆ ಅಂಗಲಾಚಿ ನಿಲ್ಲುವಂತಹ ಸುಧಿನ ನಮ್ಮದಾಗಲಿ.

ಭಾರತ ವಿಶ್ವಗುರು ಪರಿಕಲ್ಪನೆಗೆ ನಮ್ಮ ರಾಷ್ಟ್ರದ ಹಲವಾರು ಮಹನೀಯರು ಸಖಲವನ್ನೂ ಅರ್ಪಿಸಿದ್ದಾರೆ ಅವರಾರು ಯಾವುದೇ ಅಪೇಕ್ಷೆ ಇಲ್ಲದೆ ಅರ್ಪಿಸಿದ್ದರು ಅಂಥಹ ಮರಿಸ್ಥಿತಿ ಇನ್ನೆಂದಿಗೂ ಬರುವುದಿಲ್ಲವೆಂದು ಹಲವು ಹಿರಿಯರು, ಬುದ್ಧಿ ಜೀವಿಗಳು,ಸಮಾಜದ ಮೇಲೆ ನಂಬಿಕೆ ಇಲ್ಲದವರು ಹೇಳುತ್ತಿದ್ದರು ಆದರೆ ಅವೆಲ್ಲಕ್ಕು ಇಂದು ಮಹತ್ವ ಪೂರ್ಣ ಧಿಟ್ಟತನದ ನವ ಭಾರತ ಶಕ್ತಿಶಾಲಿಯಾಗಿ ನಿಲ್ಲಲು ನಮ್ಮ ರಾಷ್ಟ್ರದ ನನ್ನಂತಹ ಕೋಟ್ಯಾಂತರ ಯುವಕರು ಜಾಗೃತ ಶಕ್ತಿಯಾಗಿ ಸಮಾಜದ ಕಾರ್ಯಗಳಿಗೆ ಮುಂದಾಗ ಮಾತ್ರವೇ ಯಶಸ್ಸು ಕಾಣಲು ಸಾಧ್ಯ.

ಇಂದು ಜಗತ್ತು ನಮ್ಮನ್ನು ತಿರುಗಿ ನೋಡಿ ಕೊಡುವ ಅವಕಾಸ ಸ್ವೀಕರಿಸಲು ತುದಿಗಾಲಲ್ಲಿರುವಾಗ ನಮ್ಮಲ್ಲಿ ಮಹತ್ವಪೂರ್ಣ ಆತ್ಮ ವಿಶ್ವಾಸದಿಂದ ಸಾಗಿ ಹಲವರು ಗುರುಗಳು,ಜಂಗಮರು,ಮಾರ್ಗದರ್ಶಕರಿರುವಾಗ ವ್ಯಾಮೋಹಗಳನ್ನ ಬದಿಗೊತ್ತಿ ಸಾಗಿದಾಗಲೇ ವಿಶ್ವಗುರು ಭಾರತ ಪರಿಕಲ್ಪನೆಯನ್ನು ಇನ್ನಷ್ಟು ಮಹತ್ವದ ಸಾಧನೆಗಳೊಂದಿಗೆ ಕಾಣಬಹುದು.

-ಹರಿಪ್ರಸಾದ್ ಮಾವಿನಹಳ್ಳಿ
ಯುವ ಚಿಂತಕರು