Notice: Use of undefined constant REQUEST_URI - assumed 'REQUEST_URI' in /home/vishwa9/Ukmedia24x7.in/wp-content/themes/jannah/functions.php on line 73
ರಾಷ್ಟ್ರೀಯ ಮಟ್ಟದ ಡಾ.ರಾಜ್ ಕುಮಾರ್ ಬಾಕ್ಸಿಂಗ್ ಕಪ್ ಚಾಂಪಿಯನ್ ಶಿಪ್ ಗೆ ಬೆನ್ನೆಲುಬಾಗಿ ನಿಂತ ಶಾಸಕ ಡಾ.ಸಿ ಎನ್ ಅಶ್ವತ್ಥ್ ನಾರಾಯಣ್..!! – UKMedia 24X7
ಅಂಕಣರಾಜ್ಯಸುದ್ದಿ ಜಾಲ

ರಾಷ್ಟ್ರೀಯ ಮಟ್ಟದ ಡಾ.ರಾಜ್ ಕುಮಾರ್ ಬಾಕ್ಸಿಂಗ್ ಕಪ್ ಚಾಂಪಿಯನ್ ಶಿಪ್ ಗೆ ಬೆನ್ನೆಲುಬಾಗಿ ನಿಂತ ಶಾಸಕ ಡಾ.ಸಿ ಎನ್ ಅಶ್ವತ್ಥ್ ನಾರಾಯಣ್..!!

ರಾಷ್ಟ್ರೀಯ ಮಟ್ಟದ ಡಾ.ರಾಜ್ ಕುಮಾರ್ ಬಾಕ್ಸಿಂಗ್ ಕಪ್ ಚಾಂಪಿಯನ್ ಶಿಪ್ ಗೆ ಬೆನ್ನೆಲುಬಾಗಿ ನಿಂತ ಶಾಸಕ ಡಾ.ಸಿ ಎನ್ ಅಶ್ವತ್ಥ್ ನಾರಾಯಣ್..!!

ಮಲ್ಲೇಶ್ವರಂ ಸ್ಪೋರ್ಟ್ಸ್ ಫೌಂಡೇಷನ್ ಸಹಯೋಗದಲ್ಲಿ ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ರವರು ನಡೆಸುತ್ತಿರುವ ರಾಷ್ಟ್ರೀಯ ಮಟ್ಟದ 60ನೇ ಸೀನಿಯರ್ ನ್ಯಾಷನಲ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಡಾ.ರಾಜ್ ಕುಮಾರ್ ಕಪ್ ಪಂದ್ಯಾವಳಿಗೆ ಡಾ.ಸಿ ಎನ್ ಅಶ್ವತ್ಥ್ ನಾರಾಯಣ್ ರವರು ತಮ್ಮ ಮಲ್ಲೇಶ್ಬರಂ ಸ್ಪೋರ್ಟ್ಸ್ ಫೌಂಡೇಷನ್ ಮೂಲಕ ಕೈ ಜೋಡಿಸಿದ್ದಾರೆ.. ಇವರಿಗೆ ಸಾಥ್ ನೀಡಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ನವರಸ ನಾಯಕ ಜಗ್ಗೇಶ್ ರವರು..

ಡಾ.ಸಿ ಎನ್ ಅಶ್ವತ್ಥ್ ನಾರಾಯಣ್..

ಮಲ್ಲೇಶ್ವರಂನ ಶಾಸಕರಾದ ಡಾ.ಸಿ ಎನ್ ಅಶ್ವತ್ಥ್ ನಾರಯಾಣ್ ರವರು ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರಲ್ಲಿ ಸದಾ ಮುಂದು.. ಈಗಾಗಲೇ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿರುವ, ಮಾಡುತ್ತಿರುವ ಇವರು ಇತ್ತೀಚೆಗೆ ರಾಜು ಕನ್ನಡ ಮೀಡಿಯಂ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿದ್ದನ್ನು ಕೂಡ ನಾವಿಲ್ಲಿ ನೆನೆಯಬಹುದು..‌ ಅದೇ ರೀತಿಯಾಗಿ ಈಗ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಕೈ ಜೋಡಿಸುವುದರ ಮೂಲಕ ಅನೇಕ ಕ್ರೀಡಾಪಟುಗಳ ಪ್ರತಿಭೆ ಹೊರಬರಲು ಕಾರಣರಾಗಿದ್ದಾರೆ..

ಬಾಕ್ಸಿಂಗ್ ಪಂದ್ಯಾವಳಿಯ ಪರಿಚಯ

ಅಂತರಾಷ್ಟ್ರೀಯ ಮಟ್ಟದ ಬಾಕ್ಸರ್ ಗಳು ಬಾಗಿಯಾಗುವ ಈ ಚಾಂಪಿಯನ್ ಶಿಪ್ ಬಹಳ ವಿಶೇಷವೆನ್ನಬಹುದು.. ಹೌದು ಬೆಂಗಳೂರಿನಲ್ಲಿ ನಡೆಯುತ್ತಿರುವ 60ನೇ ಸೀನಿಯರ್ ನ್ಯಾಷನಲ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ವೈಯಾಲಿ ಕಾವಲ್ ಕೋದಂಡ ರಾಮಪುರ ಕಬಡ್ಡಿ ಮೈದಾನದಲ್ಲಿ ಜನವರಿ 24 ರಿಂದ 28 ನೇ ತಾರೀಖಿನ ವರೆಗೆ ಜರುಗುತ್ತಿದೆ.. ಒಟ್ಟು 10 ಕ್ಯಾಟಗರಿಯಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಫೈನಲ್ ಮ್ಯಾಚ್ ಇದೇ 28 ರಂದು ನಡೆಯಲಿದೆ ಎಂದು ಬಾಕ್ಸಿಂಗ್ ಮಂಡಳಿ ತಿಳಿಸಿದೆ..

ದೇಶದಾದ್ಯಂತ ಒಟ್ಟು 30 ರಾಜ್ಯಗಳಿಂದಲೂ ತಂಡಗಳು ಆಗಮಿಸಿರುವುದರ ಜೊತೆಗೆ ನಮ್ಮ ಆರ್ಮಿಯ ಎರಡು ತಂಡಗಳು ಕೂಡ ಇದರಲ್ಲಿ ಭಾಗವಹಿಸಿವೆ..

ಈ ದೊಡ್ಡ ಮಟ್ಟದ ಚಾಂಪಿಯನ್ ಶಿಪ್ ಗೆ ನಮ್ಮ ಕನ್ನಡದ ಕಣ್ಮಣಿ ಡಾ.ರಾಜ್ ಕುಮಾರ್ ರವರ ಹೆಸರಿಟ್ಟಿರುವುದು ವಿಶೇಷವಾಗಿದೆ..

ಡಾ ರಾಜ್ ಕುಮಾರ್ ಕಪ್ ಪಂದ್ಯಾವಳಿಯ ಕಾರ್ಯಕ್ರಮದಲ್ಲಿ ಖ್ಯಾತ ನಟರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಮಲ್ಲೇಶ್ವರಂ ಶಾಸಕರಾದ ಡಾ.ಸಿ ಎನ್ ಅಶ್ವತ್ಥ್ ನಾರಾಯಣ್ ರವರು ಹಾಗೂ ನವರಸ ನಾಯಕ ಜಗ್ಗೇಶ್ ಅವರು ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದ್ದರೆ…

ತೊಂದರೆಯಲ್ಲಿರುವವರಿಗೆ ಸಹಾಯಹಸ್ತ ಚಾಚುತ್ತಾ ಸದಾ ಒಂದಿಲ್ಲೊಂದು ಪ್ರತಿಭೆಗಳನ್ನು ಹೊರ ತರುತ್ತಿರುವ ಡಾ.ಸಿ ಎನ್ ಅಶ್ವತ್ಥ್ ನಾರಾಯಣ್ ರವರಿಗೆ ಕನ್ನಡಿಗರ ಕಡೆಯಿಂದ ಧನ್ಯವಾದಗಳು..

ಈ ಸುದ್ದಿಯನ್ನು ಶೇರ್ ಮಾಡಿ
Show More

Related Articles