ಕೊಲೆಯಾದ BJP ಕಾರ್ಯಕರ್ತ ಸಂತೋಷನ ಮನೆ ಹತ್ತಿರ ಸಿದ್ದರಾಮಯ್ಯನವರು ಬಿರಿಯಾನಿ ತಿಂದು ತೆಗುತ್ತಿದ್ದರು..!!

ಬೆಂಗಳೂರು: ಒಂದು ಕಡೆ ನಗರದಲ್ಲಿ ಭಾಜಪ ಕಾರ್ಯಕರ್ತ ಸಂತೋಷ ನಡುರಸ್ತೆಯಲ್ಲಿಯೇ ಹತ್ಯೆಯಾಗಿದ್ದರೆ, ಒಂದು ಕಡೆ ಕರ್ನಾಟಕ ಮುಸ್ಲಿಮರ ಮುಖ್ಯಮಂತ್ರಿ ಗುರುವಾರ ತಡರಾತ್ರಿ ಅದೇ ನಗರದಲ್ಲಿ ರಜಾಕ್ ಎನ್ನುವರ ಮನೆಯಲ್ಲಿ ಬಿರಿಯಾನಿ ತಿನ್ನುವುದರಲ್ಲಿ ಬಿಜಿಯಾಗಿದ್ದರು.

ಹೌದು..!! ನಿನ್ನೆ ತಡರಾತ್ರಿ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯುಟಿ ಖಾದರ್ ಮನೆಯಲ್ಲಿ ಭೋಜನ ಆಯೋಜಿಸಲಾಗಿತ್ತು. ಈ ಭೋಜನ ಕಾರ್ಯದಲ್ಲಿ ಮುಸ್ಲಿಮರ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಜ ಜಮೀರ್ ಅಹಮ್ಮದ್ ಹಾಗೂ ಮುಸ್ಲಿಂ ಮುಖಂಡರು ಸಹ ಪಾಲ್ಗೊಂಡಿದ್ದರು. ಶಾಸಕ ಜಮೀರ್ ಅಹಮ್ಮದ್ ಇತ್ತೀಚೆಗೆ ಕಾಂಗ್ರೆಸ್ ಸೇರಲು ಸಕಲ ತಯಾರಿಗಳನ್ನ ಮಾಡ್ಕೊಂಡಿರೋ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಕೆಲ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ಮೊದಲು ಜೆಡಿಎಸ್‌ನಿಂದ ಉಚ್ಛಾಟಿಸಲ್ಪಟ್ಟಿದ್ದ ನಾಯಕರುಗಳು ಜಮೀರ್ ರ ಪಕ್ಷಾಂತರಕ್ಕೆ ತೀವ್ರವಾಗಿ ವಿರೋಧಿಸಿದ್ದರು. ಆದರೆ, ಅದ್ಯಾವುದಕ್ಕ ಕ್ಯಾ ರೆ ಅನ್ನದೆ ಮುಸ್ಲಿಮರ ಮುಖ್ಯಮಂತ್ರಿ ಭಾಜಪ ಕಾರ್ಯಕರ್ತ ಸಂತೋಷ ಹತ್ಯೆಯ ಬೆನ್ನಲ್ಲೇ ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಭೋಜನ ಕೂಟಕ್ಕೆ ಜೈ ಅಂದಿದ್ದಾರೆ.!
ಇದೆಲ್ಲವನ್ನು ನೋಡಿದರೇ ಮುಂದಿನ ದಿನಗಳಲ್ಲಿ 100% ಜಮೀರ್ ಕಾಂಗ್ರೆಸ್ ಪ್ರವೇಶ ಶತಸಿದ್ಧ ಎನ್ನುವುದು ಪಕ್ಕಾ ಆಗಿದೆ.

ಜೆ.ಸಿ. ನಗರದ ನಿವಾಸಿ ಆಗಿರುವ 28 ವರ್ಷದ ಸಂತೋಷ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ, ಭಾಜಪ ಪರವಾಗಿಯೂ ಸಹ ಕೆಲಸ ಮಾಡುತ್ತಿದ್ದನು. ಬುಧವಾರ ರಾತ್ರಿ ಸರಿಸುಮಾರು 7:30 ರ ಸಮಯದಲ್ಲಿ ಸಂತೋಷ್ ತಮ್ಮ ಮನೆ ಹತ್ತಿರದಲ್ಲಿದ್ದ ಬೇಕರಿಯೊಂದರಲ್ಲಿ ಸಹಾ ಕುಡಿಯುತ್ತಾ ನಿಂತಿದ್ದನು. ಇದೇ ಸಮಯದಲ್ಲಿ ಅದೇ ಏರಿಯಾದ ನಿವಾಸಿಯಾದ ಮತಾಂಧ ವಾಸೀಮ್, ಉಮರ್, ಫಿಲಿಪ್ಸ್ ಮತ್ತು ಇರ್ಫಾನ್ ಅನ್ನುವ ದುಷ್ಕರ್ಮಿಗಳ ಗುಂಪೂ ಸಹ ಅಲ್ಲಿಯೇ ಚಹಾ ಕುಡಿಯುತ್ತಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ನಡೆದು ವಾಸೀಮ್ ಎಂಬಾತ ತನ್ನ ಬಳಿ ಇದ್ದ ಚಾಕುವಿನಿಂದ ಸಂತೋಷ್ ತೊಡೆಗೆ ಚುಚ್ಚಿದ್ದಾನೆ. ಇದರ ಪರಿಣಾಮವಾಗಿ ತೀವ್ರ ರಕ್ತ ಸ್ರಾವದಿಂದ ಸಂತೋಷ್ ಕೊನೆಯುಸಿರೆಳೆದಿದ್ದಾರೆ. ಸದ್ಯ ಪ್ರಕರಣ ಸಂಬಂಧ ವಸೀಂ, ಫಿಲಿಪ್ಸ್ ಎಂಬ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ನಡೆದ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಸ್ಥಳೀಯ ಭಾಜಪ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ಕೂಡ ನಡೆಸಿದ್ದರು. ಸಂತೋಷ್ ಹತ್ಯೆ ರಾಜಕೀಯ ಪ್ರೇರಿತ ಕೊಲೆ ಅಂತ ಆರೋಪಿಸಿದ್ದು, ವಸೀಂ ಸ್ಥಳೀಯ ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತರ ಮಗ, ಅವನಿಗೂ ಬಿಜೆಪಿಗೂ ಆಗುತ್ತಿರಲಿಲ್ಲ. ಹಾಗಾಗಿ ಬಿಜೆಪಿಯ ಪರ ಓಡಾಡುತ್ತಿದ್ದ ಸಂತೋಷ್‍ನನ್ನ ಕೊಲೆಗೈಯ್ಯಲಾಗಿದೆ ಎಂದು ಆರೋಪಿಸಿದ್ದರು.

ಮೂಲ : Publictv